ಒಂದು ರಾಶಿಗೆ 30 ಡಿಗ್ರಿ ವ್ಯಾಪ್ತಿ.
12 ರಾಶಿಗೆ 360 ಡಿಗ್ರಿ ವ್ಯಾಪ್ತಿ.
ಮೂರು ರಾಶಿಗೆ ಒಂದು ತ್ರಿಕೋನ
ಮೂರು ರಾಶಿಯ ವ್ಯಾಪ್ತಿ- 90 ಡಿಗ್ರಿ
ಮೂರು ರಾಶಿಗೆ ಅಂದರೆ 90 ಡಿಗ್ರಿ ಗೆ 18000 ಅಂಶಗಳಿವೆ. ಆ ಪ್ರಕಾರ ಒಂದು ರಾಶಿಗೆ 6000 ಅಂಶಗಳಾಯ್ತು. ಅಂಶಗಳಾದರೆ ಇದರ ಒಳಗೆ 30÷6000, ಮೂರು ರಾಶಿಗೆ 90 ಡಿಗ್ರಿಗೆ 18000 ಅಂಶಗಳಾಗುತ್ತದೆ. ಹೀಗೆಯೇ ಹನ್ನೆರಡು ರಾಶಿಗಳಿಗೆ ನಾಲ್ಕು ತ್ರಿಕೋನಗಳಾದರೆ ಒಟ್ಟಿಗೆ 360 ಡಿಗ್ರಿ ಆಗುತ್ತದೆ. ಆಗ 360 ಡಿಗ್ರಿಗೆ 72000 ಅಂಶಗಳಾಗುತ್ತದೆ.
ಮನುಷ್ಯನ ದೇಹದಲ್ಲಿ ಪ್ರಧಾನ 72 ಸಾವಿರ ನಾಡಿಗಳಿವೆ. ಪ್ರತೀ ನಾಡಿಗೂ ಒಂದೊಂದು ರೂಪದ ಶಕ್ತಿಗಳಿವೆ. ಆ ಶಕ್ತಿಗಳಿಗೆ ಅಭಿಮಾನಿ ದೇವತೆಗಳಿದ್ದಾರೆ. ಇದೇ ಪ್ರಕಾರದಲ್ಲಿ ಪ್ರತೀ ಗ್ರಹರೂ ಆಯಾಯ ರಾಶಿ ಸಂಚಾರದಲ್ಲಿ ಇದೇ ಪ್ರಕಾರದ ಅಂಶಗಳನ್ನು ಪಡೆದು ಇದೇ ರೀತಿಯ ದೇವತಾ ಶಕ್ತಿ ಪಡೆಯುತ್ತಾರೆ. ಶಕ್ತಿಗಳು ಆಯಾಯ ಗ್ರಹರ ಕಿರಣಗಳ ಮೂಲಕ ಭೂಮಿಗೆ ನಿರಂತರ ಬರುತ್ತಲೇ ಇರುತ್ತದೆ. ಇದರ ಪ್ರಭಾವದಿಂದಲೇ ಒಂದೇ ರೂಪ ಗುಣಗಳ ಜೀವಿಗಳಿರುವುದು ಸಾಧ್ಯವೇ ಇಲ್ಲ.
ಇನ್ನೊಂದೆಡೆ ಗ್ರಹರು ಆಯಾಯ ಶಕ್ತಿ ಪಡೆದು, ಬೇರೆ ಬೇರೆ ಗ್ರಹರಿಂದ, ಪೂರ್ಣ ದೃಷ್ಟಿ, ಮುಕ್ಕಾಲು ದೃಷ್ಟಿ, ಅರ್ಧ ದೃಷ್ಟಿ, ಕಾಲು ದೃಷ್ಟಿಯ ಮೂಲಕ ಗ್ರಹರಿಗೆ ಗುಣ ಶಕ್ತಿಗಳನ್ನು ನೀಡುತ್ತಾ ಇರುತ್ತಾರೆ. ಒಂದು ಸಣ್ಣ ಉದಾಹರಣೆ ನೋಡಿ. ದ್ವಿಸ್ವಭಾವ ರಾಶಿಗಳಾದ ಮಿಥುನ, ಕನ್ಯ, ಧನು, ಮೀನ ರಾಶಿಗಳಲ್ಲಿ ರವಿಯು ಮೊದಲ 10 ಡಿಗ್ರಿಯಲ್ಲಿ ಈಶ್ವರ ಸ್ವರೂಪ, ನಂತರದ 10 ಡಿಗ್ರಿಯಲ್ಲಿ ಸುಬ್ರಹ್ಮಣ್ಯ ಸ್ವರೂಪ, ಕೊನೆಯ 10 ಡಿಗ್ರಿಯಲ್ಲಿ ಗಣಪತಿ ಸ್ವರೂಪದಲ್ಲೂ ಫಲ ನೀಡುತ್ತಾನೆ. ಅಂದರೆ ಈಶ್ವರ, ಸುಬ್ರಹ್ಮಣ್ಯ, ಗಣಪತಿ ಅಂದರೆ ಸಂಜ್ಞಾ ಅರ್ಥ ಬೇರೆ ಇದೆ.
ಮಹಾವಿಷ್ಣುವನ್ನು ಅನಂತ ಎಂದಿದ್ದೇಕೆ?
ನಾವು ಕಣ್ಣಿಗೆ ಕಾಣದ ಶಕ್ತಿಯನ್ನು ದೇವರು ಎನ್ನುತ್ತೇವೆ. ಅದೇ ಶಕ್ತಿಯನ್ನು ಗ್ರಹಣ ಮಾಡಲು ಅಶಕ್ತರಾಗಿ ತೊಂದರೆ ಅನುಭವಿಸಿದಾಗ ದೆವ್ವ ಎನ್ನುತ್ತಾರೆ. ಇದೇ ಪ್ರಕಾರ ಎಲ್ಲಾ ಗ್ರಹ, ಅದರ ಉಪಗ್ರಹಗಳಿಂದಲೂ ದೇವತಾ ಶಕ್ತಿಗಳು ನಿರಂತರ ಪ್ರಕಟವಾಗುತ್ತಲೇ ಇರುತ್ತದೆ. ಇಲ್ಲಿಗೇ ದೇವತಾ ಶಕ್ತಿ ಇಂತಿಷ್ಟೆಂದು ಲೆಕ್ಕ ಹಾಕುವ ಹಾಗಿಲ್ಲ. ಒಂದೊಂದು ರಾಶಿಯಲ್ಲಿ ಒಂದೊಂದು ಗ್ರಹರಿಗೆ ಪ್ರತೀ ಅಂಶಗಳಲ್ಲೂ ಸ್ವರೂಪ ಬೇಧಗಳಿವೆ. ಅದೆಲ್ಲ ಒಟ್ಟಿಗೆ ಸೇರಿಸಿ ಲೆಕ್ಕ ಹಾಕಲು ಯಾರಿಂದಲೂ ಸಾಧ್ಯವೂ ಇಲ್ಲ. ಅದಕ್ಕಾಗಿ 33 ದೇವತಾ ಶಕ್ತಿಗಳು, ಅದರ ಉಪಶಕ್ತಿಗಳೆಲ್ಲಾ ಸೇರಿಸಿ ಅನಂತ ರೂಪ ಶಕ್ತಿ ಎಂದರು. ಇದೆಲ್ಲವೂ ಪ್ರದ್ಯುಮ್ನಾನಿರುದ್ಧ ಸಂಕರ್ಷಣ ರೂಪಿ ಪರಮಾತ್ಮ ಮಹಾವಿಷ್ಣುವಿನೊಳಗಿದೆ. ಹಾಗಾಗಿ ಮಹಾವಿಷ್ಣುವನ್ನು ಅನಂತ ಎಂದರು.
ವಿದೇಶಿ ತತ್ವ ಜ್ಞಾನಿಗಳೂ ಕೂಡಾ God is not a object. God is a subject ಎಂದು ಒಪ್ಪಿಕೊಂಡಿದ್ದಾರೆ. ನಮ್ಮ ಪುರಾತನರು ದೇವ* ಎಂದರೆ. ಅಂದರೆ ದೇವ ಎಂದರೆ ದಿವಿ (Space) ಇದೆಲ್ಲವೂ ಬೆಳಕಿನ ಕಿರಣ ಶಕ್ತಿಗಳು. ಆಯಾಯ ಶಕ್ತಿಗೆ ಸರಿಯಾದ ರೂಪ ಕಲ್ಪನೆ ಮಾಡಿ, ಅದನ್ನು ಆರಾಧಿಸಿ ದಿವ್ಯ ಚೈತನ್ಯಮೂರ್ತಿ ಭಗವಾನ್ ವಾಸುದೇವನೊಳಗೆ ಅಂತರ್ಗತ ಮಾಡಿ ಕೃತಾರ್ಥತೆ ಪಡೆದರು. ಒಬ್ಬನೇ ದೇವರು ಎಂದು ಅನ್ಯಮತಿಯರು ಹೇಳಿದ್ದೇನಲ್ಲ. ನಾವು ಕೂಡಾ *ಏಕೋ ಬಹು ನಾಮಾಸಿ* ವೇದಕಾಲದಲ್ಲೇ ಹೇಳಿದ್ದನ್ನೇ ಇವರು ಹೇಳುವುದಷ್ಟೆ.
ಒಬ್ಬನೇ ಮನುಷ್ಯ ಹೆಂಡತಿಗೆ ಗಂಡನಾಗಿ, ಮಕ್ಕಳಿಗೆ ಅಪ್ಪನಾಗಿ, ಆಳುಗಳಿಗೆ ದಣಿಯಾಗಿ, ಅನರ್ಥ ಮಾಡಿಕೊಂಡರೆ ಪೋಲೀಸರಿಗೆ Noted Criminal ಆಗಿ ಅಡ್ಡ ಹೆಸರಿಂದಲೂ ಕರೆಸಿಕೊಳ್ಳಬಹುದು. ಅದೇ ವ್ಯಕ್ತಿಯ ಹೆಂಡತಿ ಕರೆದಂತೆ ಕೆಲಸವನು ಕರೆಯಲಾಗುತ್ತದೆಯೇ? ಅದೇ ರೀತಿ ದೇವತಾ ಸ್ವರೂಪ ವರ್ಣನೆಯೂ ಇರುತ್ತದೆ. ಇದನ್ನೇ ಸಹಸ್ರ ಸಹಸ್ರ ನಾಮವನ್ನಾಗಿ ಕರೆದರು.
ಪೂರ್ವಾಪರ ತಿಳಿಯದೇ ಜ್ಯೋತಿಷ್ಯ ನಿಂದಿಸುವವರು ರೋಗಿಗಳು
ಜ್ಯೋತಿಷ್ಯ ಶಾಸ್ತ್ರ ಇದನ್ನು ಪ್ರಾಯೋಗಿಕವಾಗಿ ವಿಶ್ಲೇಷಣೆ ಮಾಡಿ ವಿವರಿಸಿದೆ. ಜ್ಯೋತಿಷ್ಯವನ್ನು ಹಳಿಯುವ ಮುಟ್ಠಾಳರುಗಳಿಗೆ ಕಡಿಮೆ ಏನಿಲ್ಲ. ಅವರು ಜ್ಯೋತಿಷ್ಯ ಎಂದರೆ ಕಣಿ ಹೇಳುವ ಶಾಸ್ತ್ರ ಎಂದೇ ತಿಳಿದುಕೊಂಡಿದ್ದರೆ ಫಲ ಇದು. ಪಾಪ, ಪುಣ್ಯ, ಗುಣ ಅವಗುಣ, ರೋಗ, ಅರೋಗ, ಸುಖ ದುಃಖ, ಸೋಲು ಗೆಲುವುಗಳೆಲ್ಲಾ ನಮ್ಮ ನಮ್ಮ ಕ್ರಿಯೆಗಳಿಂದ ಸಿಗುವ Product. ಆಗ ಜ್ಯೋತಿಷ್ಯದ ಮೂಲಕ ಅಂದರೆ ಗ್ರಹಸ್ಥಿತಿಯ ಮೂಲಕ ನಮ್ಮಲ್ಲಿ ಏನೇನು ನ್ಯೂನತೆಗಳಿವೆ ಎಂಬುದನ್ನು ಸರಿಪಡಿಸಿಕೊಳ್ಳಬಹುದು. ಪೂರ್ವಾಪರ ತಿಳಿಯದೆ ಜ್ಯೋತಿಷ್ಯವನ್ನು ನಿಂದನೆ ಮಾಡುವವರು ರೋಗಿಷ್ಟರೇ ಆಗುತ್ತಾರೆ. ಅಂದರೆ ಪ್ರತಿಯೊಬ್ಬರಲ್ಲೂ ಇರಲೇ ಬೇಕಾದ ಪೂರ್ವಾಪರ ಜ್ಞಾನವು ಇಲ್ಲದೇ ಹೋದಾಗ ರೋಗೋಪದ್ರಗಳು ಬಾಧಿಸುತ್ತವೆ.
Discussion about this post