ಹೌದು… ಅಟಲ್ ಜೀ ನೀವಿಲ್ಲದ ಒಂದು ತಿಂಗಳು ನಿಜಕ್ಕೂ ಒಂದರ್ಥದಲ್ಲಿ ಶೂನ್ಯವೇ…
ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ನೀವು ನಮ್ಮನ್ನೆಲ್ಲಾ ಅಗಲಿ ಮೋಕ್ಷದೆಡೆಗೆ ಸಾಗಿದಿರಿ. ನೀವೇನು ನನಗೆ ರಕ್ತ ಸಂಬಂಧಿಯಲ್ಲ, ಒಡಹುಟ್ಟಿದವರಲ್ಲ, ಸ್ನೇಹಿತರಲ್ಲ, ಬಂಧುವಲ್ಲ, ಪ್ರತಿನಿತ್ಯ ನಿಮ್ಮೊಂದಿಗೆ ಒಡನಾಟ ಹೊಂದಿದವನೂ ಅಲ್ಲ… ಆದರೂ ಸಹ ನೀವಿಲ್ಲದ ಒಂದು ತಿಂಗಳು ನಿಜಕ್ಕೂ ಶೂನ್ಯದಿಂದಲೇ ಕಳೆದುಹೋಗಿದೆ.
ಈ ಒಂದು ತಿಂಗಳಲ್ಲಿ ನಾನಲ್ಲ, ಇಡಿಯ ಭಾರತ ನಿಮ್ಮನ್ನು ಕಳೆದುಕೊಂಡ ದುಃಖದಿಂದ ಹೊರಬರುತ್ತಲೇ, ತನ್ನ ದೈನಂದಿನ ಜೀವನದೆಡೆಗೆ ಹೊಂದಿಕೊಂಡಿದೆ. ಆದರೂ ಸಹ ಈ ಒಂದು ತಿಂಗಳಲ್ಲಿ ನಿಮ್ಮನ್ನು ನೆನೆಯದ ದಿನವಿಲ್ಲ, ಗಂಟೆಯಿಲ್ಲ. ಯಾಕೆಂದರೆ, ನೀವು ನಮಗೆ ರಕ್ತ ಸಂಬಂಧಿಯಲ್ಲದೇ ಇರಬಹುದು, ಸ್ನೇಹಿತರಲ್ಲದೇ ಇರಬಹುದು, ಪ್ರತಿನಿತ್ಯ ನಿಮ್ಮೊಂದಿಗೆ ಒಡನಾಟ ಹೊಂದದೇ ಇರಲೂಬಹುದು. ಆದರೆ, ನೀವು ಕಂಡ ನನಸಾಗುತ್ತಿರುವ ಕನಸಿನ ಭಾರತದಲ್ಲಿ ನಾನು ಒಂದು ಭಾಗವಾಗುತ್ತಿದ್ದೇನೆ. ನೀವು ನಡೆದ ಹಾದಿಯಲ್ಲಿ ನಾವೂ ನಡೆಯಬೇಕು ಎಂಬ ಭಾವ ಮೂಡುವಂತಹ ಜೀವನದ ಪಾಠ ಕಲಿಸಿದ್ದೀರಿ, ದೇಶಪ್ರೇಮವನ್ನು ನಮಗಾಗಿ ಧಾರೆಯೆರೆದು ಹೋಗಿದ್ದೀರಿ. ಎಲ್ಲಕ್ಕೂ ಮಿಗಿಲಾಗಿ ನರೇಂದ್ರ ಮೋದಿಯಂತಹ ಸಮರ್ಥ ನಾಯಕನನ್ನು ನಮಗಾಗಿ ನೀವು ನೀಡಿ ಹೋಗಿದ್ದೀರಿ.. ಓರ್ವ ಸಮರ್ಥ ನಾಯಕ ಮಾತ್ರ ತನ್ನ ನಂತರ ಇನ್ನೊಬ್ಬ ಪರ್ಯಾಯ ಸಮರ್ಥ ನಾಯಕನನ್ನು ರೂಪಿಸಿಯೇ ಹೋಗುತ್ತಾನೆ ಎನ್ನುವದನ್ನು ನೀವು ಸತ್ಯಗೊಳಿಸಿದ್ದೀರಿ. ಹೀಗಿರುವಾಗ, ಯಾವ ಕ್ಷಣ ನಿಮ್ಮನ್ನು ನೆನೆಯದೇ ಬದುಕು ಸಾಗಿಸಲಿ…
2005ರಲ್ಲಿಯೇ ನೀವು ರಾಜಕೀಯ ನಿವೃತ್ತಿ ಘೋಷಿಸಿಕೊಂಡು ಆನಂತರ ಅನಾರೋಗ್ಯದಿಂದ ಬಾಹ್ಯ ಪ್ರಪಂಚದಿಂದ ನೀವು ದೂರವೇ ಆಗಿದ್ದು ನಮಗೆ ನೋವು ಕಾಡಿದ್ದರೂ ಸಹ ಈ ಪರಿಯ ಶೂನ್ಯ ಭಾವ ಕಾಡಿರಲಿಲ್ಲ. ಆದರೆ, ಈಗ್ಗೆ ಒಂದು ತಿಂಗಳ ಹಿಂದೆ ನೀವು ನಮ್ಮ ಲೋಕವನ್ನೇ ಬಿಟ್ಟು ಹೋದಿರಲ್ಲ ಅಂದಿನಿಂದಲೇ ಕಾಡಿದ್ದು ಈ ಭಾವ ಹಾಗೂ ಅದರ ನೋವು…
ಒಂದು ವಿಚಾರ ಅಟಲ್ ಜೀ, ನೀವು ನೀಡಿದ ಪ್ರಧಾನ ಸೇವಕ ಅಜೇಯ ಭಾರತ್, ಅಟಲ್ ಬಿಜೆಪಿ ಎಂಬ ಕಲ್ಪನೆಯ ಅಡಿಯಲ್ಲಿ ನಿಮ್ಮ ಹೆಸರು ವಿಜೃಂಭಿಸಲು ಹೆಜ್ಜೆಯಿಟ್ಟಿದ್ದಾರೆ. ಇದಕ್ಕೆ ನಿಮ್ಮ ಆರ್ಶೀವಾದ ಬೇಕು ಅಟಲ್ ಜೀ… ಇದಕ್ಕಾಗಿ ಅನುಗ್ರಹಿಸಿ… ನೀವು ಕಂಡ ಕನಸಿನ ಭಾರತಕ್ಕಾಗಿ ನಮ್ಮ ಪ್ರೀತಿಯ ಪ್ರಧಾನ ಸೇವಕ ಹಗಲಿರುಳು ದುಡಿಯುತ್ತಿದ್ದಾನೆ… ಮೋಕ್ಷದಲ್ಲಿರುವ ನೀವು ಅನುಗ್ರಹಿಸಿದರೆ, ಅವರನ್ನು ಮತ್ತೊಮ್ಮೆ ಅದೇ ಸ್ಥಾನದಲ್ಲಿ ಕುಳ್ಳರಿಸಿ ತಾಯಿ ಭಾರತಿ ಹೆಮ್ಮೆಯಿಂದ ಬೀಗುವಂತೆ ಮಾಡಲು ಸಾಧ್ಯ… ಹೀಗಾಗಿ, ಆರ್ಶೀವದಿಸಿ ಅಟಲ್ ಜೀ…
ಹೌದು ಅಟಲ್ ಜೀ ನೀವಿಲ್ಲದ ಶೂನ್ಯ ಕವಿದ ಒಂದು ತಿಂಗಳು ಕಳೆದಿದ್ದರೂ ನಿಮ್ಮ ನೆನಪು ಮಾತ್ರ ಸೂರ್ಯ ಚಂದ್ರರಿರುವಷ್ಟು ಕಾಲ ಅಜರಾಮರವಾಗಿರುತ್ತದೆ, ಅದು ನೀವು ಬದುಕಿದ ಜೀವನ ಶೈಲಿಯಿಂದ, ನೀವು ಪ್ರೀತಿಸಿ ದೇಶ ಪ್ರೇಮದ ಭಾವದಿಂದ… ನೀವು ನೀಡಿದ ಪ್ರಧಾನ ಸೇವಕನಿಂದ…
ಅಟಲ್ ಜೀ ಅಮರ್ ರಹೇ…
-ಎಸ್.ಆರ್. ಅನಿರುದ್ಧ ವಸಿಷ್ಠ
9008761663
Discussion about this post