ಅಟಲ್ ಬಿಹಾರಿ ವಾಜಪೇಯಿ, ಈ ಹೆಸನ್ನು ಹೇಳುವುದಕ್ಕೆ ಹೆಮ್ಮೆ ಅನಿಸುತ್ತದೆ. ಭಾರತ ದೇಶ ಕಂಡ ಕೆಲವೇ ಮಹಾನ್ ಪ್ರಧಾನಮಂತ್ರಿಗಳಲ್ಲಿ ಅಟಲ್ ಜೀ ಕೂಡಾ ಒಬ್ಬರು. ಅಟಲ್ ಜೀ ಹುಟ್ಟಿದ್ದು 1924ರ ಡಿಸೆಂಬರ್ 25ರಂದು, ಮದ್ಯಪ್ರದೇಶದ ಗ್ವಾಲಿಯರ್ ಬಳಿಯ ಶಿಂದೆ ಕಿ ಚವ್ಹಾಣಿ ಎನ್ನುವ ಪುಟ್ಟ ಊರಿನಲ್ಲಿ.
ಕ್ರಿಸ್ಮಸ್ ದಿನಾಚರಣೆಯಂದು ಜನಿಸಿದ ಅಟಲ್ ಜೀ ಮುಂದೆ ಒಂದು ದಿನ ದೇಶವೇ ಹೆಮ್ಮೆ ಪಡುವಂತಹ ಪ್ರಧಾನಿಯಾಗುತ್ತಾರೆ ಎಂದು ಬಹುಷಃ ಅಂದು ಯಾರೂ ಊಹಿಸಿರಲಿಕ್ಕಿಲ್ಲ ಅನ್ಸತ್ತೆ. ತಂದೆ ಕೃಷ್ಣ ಬಿಹಾರಿ ವಾಜಪೇಯಿ ತಾಯಿ ಕೃಷ್ಣ ದೇವಿ.
ಅಟಲ್ ಜೀ ಅಜ್ಜ ಪಂಡಿತ್ ಶ್ಯಾಮ್ ಲಾಲ್ ವಾಜಪೇಯಿ ರವರು ಊರಿನಲ್ಲಿ ಹೆಸರುವಾಸಿಯಾಗಿದ್ದರು.
ಅಟಲ್ ಜೀ ಅವರ ಪದವಿಯನ್ನು ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿಎವಿ ಕಾಲೇಜಿನಿಂದ ಪಡೆದರು. ನಂತರ ಆರ್‌ಎಸ್‌ಎಸ್ ಸೇರ್ಪಡೆಯಾಗಿ ಸಕ್ರಿಯ ಕಾರ್ಯಕರ್ತರಾದರು. ವೀರ ಅರ್ಜುನ ಹಾಗೂ ಪಾಂಚಜನ್ಯ ಎನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಹಾಗೂ ಕವಿಯಾಗಿಯೂ ಸೇವೆ ಸಲ್ಲಿಸಿದರು ಅಟಲ್ ಜೀ…
ಅಟಲ್ ಜೀ ರಾಜಕೀಯ ಜೀವನ ಆರಂಭವಾಗಿದ್ದು 1942ರಲ್ಲಿ. ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ದೇಶದಾದ್ಯಂತ 1942ರಲ್ಲಿ ಆರಂಭವಾಗಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಅಟಲ್ ಜೀ ತಮ್ಮ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಬ್ರಿಟೀಷರ ವಿರುದ್ದದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ 23 ದಿನಗಳ ಕಾಲ ಜೈಲುವಾಸವನ್ನು ಅನುಭವಿಸಬೇಕಾಯಿತು.
1953ರಲ್ಲಿ ಭಾರತೀಯ ಜನಸಂಘದ ಮೂಲಕ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪರಿಚಯ ಆಯಿತು. 1957ರಲ್ಲಿ ಮೊದಲ ಬಾರಿಗೆ ಅಟಲ್ ಜೀ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು. ನಂತರದ ದಿನಗಳಲ್ಲಿ ಇವರ ಚತುರತೆಯನ್ನು ಕಂಡು ನೆಹರೂ ಕೂಡಾ ಜೀ ಹೇಳಿದ್ದಂತೆ, ಈ ವ್ಯಕ್ತಿ ಮುಂದೆ ದೇಶದ ಪ್ರಧಾನಿ ಆಗ್ತಾರೆ ಎಂದು ಅಂದೇ ಅವರು ಭವಿಷ್ಯ ನುಡಿದಿದ್ದರಂತೆ.
ವಾಜಪೇಯಿಯವರ ಅಸಾಮಾನ್ಯ ಬುದ್ದಿವಂತಿಕೆಯಿಂದಾಗಿ ಎಷ್ಟರ ಮಟ್ಟಿಗೆ ಬೆಳೆದರು ಎಂದರೆ ಜಸ ಸಾಮಾನ್ಯರಲ್ಲಿ ಭಾರತೀಯ ಜನ ಸಂಘ ಅನ್ನುವ ಹೆಸರನ್ನೇ ಕೇಳದ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿ ಬೆಳೆಸಿದರು. ಅದಕ್ಕೆ ಹೆಗಲು ಕೊಟ್ಟವರು ಲಾಲ್ ಕೃಷ್ಣ ಅಡ್ವಾಣಿ, ನಾನಾಜಿ ದೇಶ್‌ಮುಖ್ ಹಾಗೂ ಬಾಲರಾಜ್ ಮಧೋಕ್…
Discussion about this post