ಕಲ್ಪ ಮೀಡಿಯಾ ಹೌಸ್ | ಅಟಾರಿ |
ಭಾರತ ಹಾಗೂ ಪಾಕಿಸ್ಥಾನ ನಡುವಿನ ಅಟಾರಿ ಗಡಿಯಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ಆ ಶಿಶುವಿಗೆ ಬಾರ್ಡರ್(ಗಡಿ) ಎಂದು ನಾಮಕರಣ ಮಾಡಿರುವ ವಿಚಿತ್ರ ಪ್ರಸಂಗ ನಡೆದಿದೆ.
ಪಾಕಿಸ್ಥಾನ ಮೂಲದ ಬಲರಾಮ್ ರಾಮ್ ಹಾಗೂ ನಿಂಬು ಬಾಯಿ ದಂಪತಿ ಸೇರಿ ಸುಮಾರು 97 ಮಂದಿ ಭಾರತಕ್ಕೆ ತೀರ್ಥಯಾತ್ರೆಗೆ ಬಂದಿದ್ದರು. ಆದರೆ, ತಮ್ಮ ದೇಶಕ್ಕೆ ಮರಳಲು ದಾಖಲೆಗಳು ಸರಿ ಎಲ್ಲವೆಂಬ ಕಾರಣಕ್ಕಾಗಿ ಅವರು ಗಡಿಯಲ್ಲಿ ಸುಮಾರು 71 ದಿನಗಳಿಂದಲೂ ಸಿಲುಕಿಕೊಂಡಿದ್ದರು. ಡಿ.೨ರಂದು ನಿಂಬು ಬಾಯಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಪಂಜಾಬ್ ಹಾಗೂ ಸನಿಹದ ಗ್ರಾಮದ ಜನರು ವೈದ್ಯಕೀಯ ಸಹಾಯ ನೀಡಿದರು. ಈ ವೇಳೆ ಆಕೆ ಎರಡು ದೇಶಗಳ ಗಡಿ ಪ್ರದೇಶದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಈ ವಿಶಿಷ್ಠ ಪ್ರದೇಶದಲ್ಲಿ ಜನ್ಮ ನೀಡಿರುವ ಹಿನ್ನೆಲೆಯಲ್ಲಿ ತನ್ನ ಶಿಶುವಿಗೆ ಬಾರ್ಡರ್(ಗಡಿ) ಎಂದು ನಾಮಕರಣ ಮಾಡಲು ಈ ದಂಪತಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಈ ದಂಪತಿ ಸೇರಿ ಎಲ್ಲ ಯಾತ್ರಿಕರು ಅಂತಾರಾಷ್ಟ್ರೀಯ ಚೆಕ್ ಪೋಸ್ಟ್’ಗೆ ಸೇರಿದ ಟೆಂಟ್’ನಲ್ಲಿ ಆಶ್ರಯ ಪಡೆದಿದ್ದು, ಸ್ಥಳೀಯರು ಆಹಾರ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post