ಕಲ್ಪ ಮೀಡಿಯಾ ಹೌಸ್ | ಅಥಣಿ |
ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಲಕ್ಷ್ಮಣ ಸವದಿ Lakshmana Savadi ಅವರು ದೀಪಾವಳಿ ದಿನದಂದು ವಿಶೇಷಚೇತನನೋರ್ವನ ಬಾಳಿಗೆ ಬೆಳಕಾಗಿದ್ದಾರೆ. 2003ರಲ್ಲಿ ಕುರಿಗಳಿಗೆ ಮೇವು ತರಲು ಹೋಗಿ ಮರದಿಂದ ಕೆಳಗೆ ಬಿದ್ದು, ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿ ಮನೆಯಲ್ಲೇ ಹಾಸಿಗೆ ಹಿಡಿದಿದ್ದ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಹನುಮಂತ ಕುರುಬರ ಎಂಬ ಯುವಕನಿಗೆ 1 ಲಕ್ಷ ರೂ. ಮೌಲ್ಯದ ಟ್ರೈ ಸೈಕಲ್ನ್ನು ವೈಯಕ್ತಿಕವಾಗಿ ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮದಲ್ಲಿ ಹನುಮಂತನಿಗೆ ಬಂದೊದಗಿದ ಸಂಕಷ್ಟದ ಕುರಿತು ವರದಿ ಪ್ರಸಾರವಾಗಿತ್ತು. ಆಗ ಲಕ್ಷ್ಮಣ ಸಂ. ಸವದಿಯವರನ್ನು ವಾಹಿನಿಯ ಮುಖ್ಯಸ್ಥರು ಸಂಪರ್ಕಿಸಿದ್ದ ಸಂದರ್ಭದಲ್ಲಿ ಯುವಕನಿಗೆ ನೆರವು ನೀಡುವುದಾಗಿ ವಾಗ್ದಾನ ಮಾಡಿದ್ದರು. ಅದರಂತೆ ಬದುಕಿನ ಅಂಧಕಾರ ಕಳೆದು ಬೆಳಕನ್ನು ಮೂಡಿಸುವ ಶುಭ ಕಾಲ ದೀಪಾವಳಿಯಂದು (ಅ.26. 2002ರಂದು) ತಮ್ಮ ಅಥಣಿಯ ನಿವಾಸದಲ್ಲಿ 1 ಲಕ್ಷ ರೂ. ಮೌಲ್ಯದ ಟ್ರೈ ಸೈಕಲ್ನ್ನು ನೀಡಿದರು.
Also read: ಶಿವಮೊಗ್ಗ ಹೆಲ್ತ್ ಕೇರ್ ಎಂಪ್ಲಾಯಿಸ್ ಅಸೋಸಿಯೇಶನ್’ನಿಂದ ವೈದ್ಯರಿಗೆ ಗಾಯನ ಸ್ಪರ್ಧೆ
ಇಂತಹ ಸೇವೆ ಮಾಡುವ ಅವಕಾಶ ಸಿಕ್ಕಿರುವುದೇ ನನ್ನ ಸುದೈವ ಎಂದು ಲಕ್ಷ್ಮಣ ಸವದಿಯವರು ತಿಳಿಸಿದರೆ, ಮತ್ತೊಂದೆಡೆ ಲಕ್ಷ್ಮಣ ಸವದಿಯವರು ನಿಜಕ್ಕೂ ನನ್ನ ಬಾಳಲ್ಲಿ ಬೆಳಕು ಮೂಡಿಸಿದ್ದಾರೆ. ಅವರಿಗೆ ಹಾಗೂ ಅವರ ಸಮಸ್ತ ಕುಟುಂಬಕ್ಕೆ ದೇವರು ಒಳಿತು ಮಾಡಲಿ ಎಂದು ಹನುಮಂತ ಕುರುಬರ ಪ್ರಾರ್ಥಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post