ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೃಷ್ಣ ನದಿ ದಂಡೆಯಲ್ಲಿ ರೈತರ ಸಂಘ, ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರು ನಡೆಸುತ್ತಿರುವ ಹೋರಾಟಕ್ಕೆ ಈಗ ಮಠಾಧೀಶರೂ ಸಹ ಬೆಂಬಲ ಸೂಚಿಸಿದ್ದಾರೆ.
ಪ್ರತಿಭಟನಾನಿರತರಿಗೆ ಬೆಂಬಲ ಸೂಚಿಸಿ ಮಾತನಾಡಿರುವ ಅಥಣಿಯ ಗಚ್ಚಿನಮಠದ ಶ್ರೀಶಿವಬಸವ ಸ್ವಾಮಿಗಳು, ನೀರು ಎಲ್ಲರಿಗೂ ಬೇಕು ನೀರಿಲ್ಲದೆ ಜೀವನವೇ ಇಲ್ಲ ದನಕರಗಳು ಜಾನುವಾರುಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮದು ಕೂಡ ಹೋರಾಟದಲ್ಲಿ ಬೆಂಬಲವಿದೆ. ನೀರಿಗಾಗಿ ರಾಜಕಾರಣ ಮಾಡಬೇಡಿ ಆಶ್ವಾಸನೆ ಕೊಡುವುದನ್ನು ಬಿಡಿ ಅಧಿಕಾರಿಗಳೇ ನೀರಿಗಾಗಿ ಆಹಾಕಾರ ಮುಗಿಲು ಮುಟ್ಟುತ್ತಿದೆ ಎಂದರು.
ಶ್ರೀಸಿದ್ದಲಿಂಗ ಸ್ವಾಮಿಗಳು ಮಾತನಾಡಿ, ಪ್ರತಿವರ್ಷ ನೀರಿಗಾಗಿ ಆಹಾಕಾರ ಮುಗಿಲು ಮುಟ್ಟುತ್ತಿದೆ. ಇದನ್ನು ರಾಜಕಾರಣಿಗಳು ಹಾಗೂ ಅಧಿಕಾರಿಗಳು ನೀರಿಗಾಗಿ ಮುಕ್ತ ಪರಿಹಾರವನ್ನು ಕಲ್ಪಿಸಿ ಇನ್ನು ಮುಂದೆ ಇದು ಯಾವುದೇ ರೀತಿಯ ಆಹಾಕಾರ ಬರದಂತೆ ನೋಡಿಕೊಳ್ಳಿ ಹಾಗೂ ಸೂಕ್ತ ಪರಿಹಾರವನ್ನು ತೆಗೆದುಕೊಳ್ಳಿ. ಕೃಷ್ಣಾ ನದಿ ನೀರಿಗಾಗಿ ಶಾಶ್ವತ ಪರಿಹಾರ ಕೊಡಿಸಿ ಎಂದು ಸರಕಾರಕ್ಕೆ ಮಾಧ್ಯಮದ ಮುಖಾಂತರ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ನೀರಿಗಾಗಿ ಆಹಾಕಾರ ಸಮಸ್ಯೆ ಬಗೆಹರಿಯದೆ ಹೋದಲ್ಲಿ ರೈತರ ಜೊತೆ ಗುಡಿ ಉಗ್ರ ಹೋರಾಟ ಮಾಡುವುದಾಗಿ ಹೇಳಿದರು.
Discussion about this post