ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕಾಂಗ್ರೆಸ್ ನಗರಾಧ್ಯಕ್ಷ ಹಾಗೂ ನ್ಯಾಯವಾದಿ ಟಿ. ಚಂದ್ರೇಗೌಡ ಅವರ ಮೇಲೆ ಯುವಕನೋರ್ವ ಹಲ್ಲೆ ಮಾಡಿದ ಘಟನೆ ಶನಿವಾರ ಮಧ್ಯಾಹ್ನ ಶಾಸಕರ ಮನೆ ಮುಂಭಾಗ ನಡೆದಿದೆ.
ಶಾಸಕರ ಮನೆಯಂಗಳದಲ್ಲಿ ವೈವಾಹಿಕ ವಿಷಯದ ಪ್ರಕರಣದ ಸಂಬಂಧ ಚಂದ್ರೇಗೌಡರು ಉಭಯ ಪಕ್ಷಗಾರರ ನಡುವೆ ರಾಜಿ ಸಂಧಾನವೊಂದನ್ನು ಮುಗಿಸಿ ಅಲ್ಲಿಂದ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕಿರಣ ಎಂಬ ಯುವಕನೋರ್ವ ಒಮ್ಮಗೆ ಏಕಾಏಕಿ ಧಾವಿಸಿ ಚಂದ್ರೇಗೌಡರ ಹಣೆಯ ಎಡಭಾಗಕ್ಕೆ ಕೈಯಿಂದ ಬಿರುಸಾಗಿ ಹೊಡೆದಿದ್ದಾನೆ. ಪರಿಣಾಮವಾಗಿ ಚಂದ್ರೇಗೌಡರ ಹಣೆಗೆ ಗಾಯವಾಗಿ ಅವರು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಳೇನಗರ ಪೋಲಿಸರು ಹಲ್ಲೆಗೊಳಗಾದ ಚಂದ್ರೇಗೌಡರ ಹೇಳಿಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post