ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಲ್ಲೂರು: ದಶಕಗಳ ಕಾಲ ಇನ್ನಿಲ್ಲದಂತೆ ಕಾಡಿದ್ದ ಧೂಳಿನ ಸಮಸ್ಯೆಯ ಬೈಂದೂರಿನ ಜನಪ್ರಿಯ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರ ಪ್ರಯತ್ನದಿಂದಾಗಿ ಪರಿಹಾರವಾಗಿದ್ದು, ಇದರಿಂದ ನೂರಾರು ಶಾಲಾ ಮಕ್ಕಳಿಗೆ ಹಾಗೂ ಸಾವಿರಾರು ಮಂದಿಗೆ ಸಹಕಾರಿಯಾಗಿದೆ.
ಹೌದು, ಕಳೆದ ಹಲವು ದಶಕಗಳಿಂದ ಧೂಳಿನಿಂದ ಕೂಡಿದ ಹೊಸೂರು ಕೊಲ್ಲೂರು ದೇವಳದ ಪ್ರೌಢಶಾಲೆಯಿಂದ ಕಾನ್ಬೇರು ಮಹಿಷ ಮರ್ದಿನಿ ದೇವಸ್ಥಾನದವರೆಗಿನ ರಸ್ತೆಗೆ ಶಿಕ್ಷಣ ಪ್ರೇಮಿಯೂ ಆದ ಶಾಸಕ ಸುಕುಮಾರ ಶೆಟ್ಟಿಯವರು 150 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿಸಿ, ಅದರ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ಶಾಸಕರ ಈ ಜನಪರ ಕಾರ್ಯಕ್ಕೆ ಈ ಭಾಗದ ಮಂದಿ ಕೃತಜ್ಞತೆ ಸಲ್ಲಿಸಿದ್ದಾರೆ.
Get in Touch With Us info@kalpa.news Whatsapp: 9481252093




Discussion about this post