ಕಲ್ಪ ಮೀಡಿಯಾ ಹೌಸ್ | ಬೀರೂರು |
ಯಶವಂತಪುರ ಬಿಕಾನೇರ್ #Bikaner ನಡುವೆ ವಾರಕ್ಕೆರಡು ದಿನ ಸಂಚರಿಸುವ ವಿಶೇಷ ರೈಲನ್ನು ಬೀರೂರು #Birur ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಪ್ರಕಟಣೆ ನೀಡಿದ್ದು, 16587/16588 ಸಂಖ್ಯೆಯ ರೈಲು ಯಶವಂತಪುರ-ಬಿಕಾನೇರ್-ಯಶವಂತಪುರ #Yashwantpur ವಾರಕ್ಕೆರಡು ಬಾರಿ ಬೀರೂರು ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯ ಜ.1 ರಿಂದ ಜೂನ್ 30, 2025 ರವರೆಗೆ ಇನ್ನೂ ಆರು ತಿಂಗಳ ಕಾಲ ಮುಂದುವರೆಯಲಿದೆ.
Also Read>> ಸಾವಯವ ಪದ್ದತಿಯಲ್ಲಿ ಹಣ್ಣು-ತರಕಾರಿ ಬೆಳೆಯಿರಿ | ಶ್ರೀಧರ್ ಸಲಹೆ
ಕಾಯ್ದಿರಿಸದ ವಿಶೇಷ ರೈಲುಗಳ ವಿಸ್ತರಣೆ
ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ 07301/07302 ಸಂಖ್ಯೆಯ ರೈಲು ಬೆಳಗಾವಿ-ಮಿರಜ್-ಬೆಳಗಾವಿ ಮತ್ತು ರೈಲು ಸಂಖ್ಯೆ 07303/07304 ಬೆಳಗಾವಿ-ಮೀರಜ್-ಬೆಳಗಾವಿ ಕಾಯ್ದಿರಿಸದ ವಿಶೇಷ ಎಕ್ಸ್’ಪ್ರೆಸ್ ಸೇವೆಗಳನ್ನು ಜನವರಿ 31, 2025 ರವರೆಗೆ ವಿಸ್ತರಿಸಿದೆ. ಈ ಸೇವೆಗಳನ್ನು ಈ ಹಿಂದೆ ಡಿಸೆಂಬರ್ 31, 2024 ರವರೆಗೆ ಓಡಿಸಲು ನಿರ್ಧರಿಸಲಾಗಿತ್ತು.
ವಿಶೇಷ ರೈಲುಗಳು ತಮ್ಮ ಅಸ್ತಿತ್ವದಲ್ಲಿರುವ ಸಂಯೋಜನೆ, ಸಮಯ ಮತ್ತು ನಿಲುಗಡೆಗಳೊಂದಿಗೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post