ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಹುಬ್ಬಳ್ಳಿ ವಿಭಾಗದ ಅಡಿಯಲ್ಲಿ ಬರುವ ವಿಜಯಪುರ-ಬಾಗಲಕೋಟೆ ಭಾಗದ 35 ಕಿಲೋಮೀಟರ್ ಜೋಡಿ ಮಾರ್ಗ ನಿರ್ಮಾಣದ ಭಾಗವಾಗಿ, ಆಲಮಟ್ಟಿ–ಜಡ್ರಾಮಕುಂಟಿ–ಮುಗಳಳ್ಳಿ–ಬಾಗಲಕೋಟೆ ನಡುವಿನ ಡಬ್ಲಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲು ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಅವುಗಳ ವಿವರ ಈ ಕೆಳಗಿನಂತಿವೆ:
ರೈಲುಗಳ ಸಂಚಾರ ರದ್ದು:
- ಆಗಸ್ಟ್ 14 ರಿಂದ 23, 2025 ರವರೆಗೆ ಸೋಲಾಪುರ – ಹೊಸಪೇಟೆ ದೈನಂದಿನ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 11415), ಮತ್ತು ಆಗಸ್ಟ್ 15 ರಿಂದ 24, 2025 ರವರೆಗೆ ಹೊಸಪೇಟೆ – ಸೋಲಾಪುರ ದೈನಂದಿನ ಎಕ್ಸ್‌ಪ್ರೆಸ್ (11416) ರೈಲುಗಳ ಸಂಚಾರ ರದ್ದುಗೊಳ್ಳಲಿವೆ.
- ಆಗಸ್ಟ್ 16 ರಿಂದ 23, 2025 ರವರೆಗೆ, ರೈಲು ಸಂಖ್ಯೆ 56906 ಎಸ್.ಎಸ್.ಎಸ್. ಹುಬ್ಬಳ್ಳಿ – ಸೋಲಾಪುರ ದೈನಂದಿನ ಪ್ಯಾಸೆಂಜರ್ ಮತ್ತು ಆಗಸ್ಟ್ 17 ರಿಂದ 24, 2025 ರವರೆಗೆ ರೈಲು ಸಂಖ್ಯೆ 56905 ಸೋಲಾಪುರ – ಎಸ್.ಎಸ್.ಎಸ್. ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ರೈಲುಗಳ ಪ್ರಯಾಣ ರದ್ದುಗೊಳ್ಳಲಿವೆ.
- ಆಗಸ್ಟ್ 17 ರಿಂದ 24, 2025 ರವರೆಗೆ ರೈಲು ಸಂಖ್ಯೆ 56903 ಸೋಲಾಪುರ – ಧಾರವಾಡ ದೈನಂದಿನ ಪ್ಯಾಸೆಂಜರ್ ಮತ್ತು ಆಗಸ್ಟ್ 16 ರಿಂದ 23, 2025 ರವರೆಗೆ ರೈಲು ಸಂಖ್ಯೆ 56904 ಧಾರವಾಡ – ಸೋಲಾಪುರ ದೈನಂದಿನ ಪ್ಯಾಸೆಂಜರ್ ರೈಲುಗಳ ಪ್ರಯಾಣ ರದ್ದುಗೊಳ್ಳಲಿವೆ.
- ಆಗಸ್ಟ್ 17 ರಿಂದ 22, 2025 ರವರೆಗೆ ರೈಲು ಸಂಖ್ಯೆ 07329 ಎಸ್.ಎಸ್.ಎಸ್. ಹುಬ್ಬಳ್ಳಿ – ವಿಜಯಪುರ ದೈನಂದಿನ ಇಂಟರ್‌ಸಿಟಿ ವಿಶೇಷ ಎಕ್ಸ್‌ಪ್ರೆಸ್ ಮತ್ತು ಆಗಸ್ಟ್ 18 ರಿಂದ 23, 2025 ರವರೆಗೆ ರೈಲು ಸಂಖ್ಯೆ 07330 ವಿಜಯಪುರ – ಎಸ್.ಎಸ್.ಎಸ್. ಹುಬ್ಬಳ್ಳಿ ದೈನಂದಿನ ಇಂಟರ್‌ಸಿಟಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣ ರದ್ದುಗೊಳ್ಳಲಿವೆ.
- ಆಗಸ್ಟ್ 20 ರಿಂದ 23, 2025 ರವರೆಗೆ ರೈಲು ಸಂಖ್ಯೆ 06920 ವಿಜಯಪುರ – ಎಸ್.ಎಸ್.ಎಸ್. ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ವಿಶೇಷ ಮತ್ತು ರೈಲು ಸಂಖ್ಯೆ 06919 ಎಸ್.ಎಸ್.ಎಸ್. ಹುಬ್ಬಳ್ಳಿ – ವಿಜಯಪುರ ದೈನಂದಿನ ಪ್ಯಾಸೆಂಜರ್ ವಿಶೇಷ ರೈಲುಗಳ ಪ್ರಯಾಣ ರದ್ದುಗೊಳ್ಳಲಿವೆ.
ರೈಲುಗಳ ಮಾರ್ಗ ಬದಲಾವಣೆ:
- ಆಗಸ್ಟ್ 15 ರಿಂದ 22, 2025 ರವರೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 17319 ಎಸ್ಎಸ್ಎಸ್ ಹುಬ್ಬಳ್ಳಿ – ಹೈದರಾಬಾದ್ ದೈನಂದಿನ ಎಕ್ಸ್‌ಪ್ರೆಸ್ ರೈಲು ಗದಗ, ಹೊಸಪೇಟೆ, ಬಳ್ಳಾರಿ, ಗುಂತಕಲ್, ರಾಯಚೂರು, ಯರಮರಸ, ಚಿಕ್ಕಸೂಗೂರು, ಯದ್ಲಾಪುರ, ಕೃಷ್ಣಾ, ನಾಲವಾರ ನಾರ್ತ್ ಮತ್ತು ವಾಡಿ ಮಾರ್ಗವಾಗಿ ಚಲಿಸಲಿದೆ. ಮಾರ್ಗ ಬದಲಾಗಿ ಚಲಿಸುವುದರಿಂದ ಹೊಳೆ ಆಲೂರು ಮತ್ತು ಶಹಾಬಾದ್ ನಡುವಿನ ನಿಲುಗಡೆ ಇರುವುದಿಲ್ಲ.
- ಆಗಸ್ಟ್ 16 ರಿಂದ 22, 2025 ರವರೆಗೆ ಹೈದೆರಾಬಾದಿನಿಂದ ಹೊರಡುವ ರೈಲು ಸಂಖ್ಯೆ 17320 ಹೈದರಾಬಾದ್ – ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್ ರೈಲು ವಾಡಿ, ನಾಲವಾರ ನಾರ್ತ್, ಕೃಷ್ಣಾ, ಯದ್ಲಾಪುರ, ಚಿಕ್ಕಸೂಗೂರು, ಯರಮರಸ,, ರಾಯಚೂರು, ಗುಂತಕಲ್, ಬಳ್ಳಾರಿ, ಹೊಸಪೇಟೆ, ಗದಗ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಮಾರ್ಗ ಬದಲಾಗಿ ಚಲಿಸುವುದರಿಂದ ಶಹಾಬಾದ್‌ನಿಂದ ಹೊಳೆ ಆಲೂರುವರೆಗಿನ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post