ಕಲ್ಪ ಮೀಡಿಯಾ ಹೌಸ್ | ಔರಂಗಾಬಾದ್ |
ಔರಂಗಬಾದ್ ನಲ್ಲಿರುವ ಮಹಾವೀರ ಜೈನ್ ಗೋಶಾಲೆಗೆ ಭೇಟಿನೀಡಿ ನಿರ್ವಹಣೆ ಗೋ ಶಾಲೆಗಳ ನಿರ್ವಹಣೆ ಕುರಿತು ಸಚಿವ ಪ್ರಭು ಚವ್ಹಾಣ್ ಚರ್ಚೆ ನಡೆಸಿದರು.
ಕಳೆದ ನೂರು ವರ್ಷಗಳಿಂದ ಜೈನ ಸಮುದಾಯದವರು ಗೋಶಾಲೆಯನ್ನು ಅತ್ಯಂತ ಶ್ರದ್ಧಾ ಭಕ್ತಿ ಪೂರ್ವಕವಾಗಿ ನಡೆಸುತ್ತಿದ್ದಾರೆ. ಗೋವುಗಳ ಬಗ್ಗೆ ಜೈನ ಸಮುದಾಯದ ಪ್ರೀತಿ ಹಾಗೂ ಆರೈಕೆ ಕಂಡು ಸಚಿವರು ಸಂತೋಷ ವ್ಯಕ್ತಪಡಿಸಿದರು.
ಸುಮಾರು ನೂರಕ್ಕೂ ಹೆಚ್ಚು ಗೋವುಗಳನ್ನು ಇಲ್ಲಿ ಸಾಕಲಾಗಿದ್ದು ಔರಂಗಾಬಾದ್ ಸುತ್ತಮುತ್ತಲಿನ ರೈತಾಪಿ ವರ್ಗ ಹಸುಗಳನ್ನು ಕಸಾಯಿಖಾನೆಗೆ ಕೊಡದೆ ಮಹಾವೀರ್ ಗೋಶಾಲೆಗೆ ನೀಡುತ್ತಾರೆ. ಸರ್ಕಾರದ ಯಾವುದೇ ಅನುದಾನ ಇಲ್ಲದೆ ಕಳೆದ 100 ವರ್ಷಗಳಿಂದ ಸಮುದಾಯದ ಹಂತದಲ್ಲಿಯೇ ಗೋಶಾಲೆ ನಿರ್ವಹಿಸುತ್ತಿರುವುದು ಕಂಡು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಭೇಟಿಯ ಸಂದರ್ಭದಲ್ಲಿ ಗೋಶಾಲೆ ಮುಖ್ಯಸ್ಥರಾದ ಪ್ರಕಾಶ್ ಕಟಾರಿಯಾ ಗೋಶಾಲೆ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post