ಕಲ್ಪ ಮೀಡಿಯಾ ಹೌಸ್ | ಆಯನೂರು |
ಇಲ್ಲಿನ ಕೋಟೆ ಬಳಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ #Road Accident ಇಬ್ಬರು ಯುವಕರು ಅತ್ಯಂತ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಯುವಕರನ್ನು ಅಕಿಫ್(21) ಮತ್ತು ಚಾಂದ್ ಪೀರ್(18) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗುರುಕಿರಣ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಈ ಇಬ್ಬರೂ ಆಯನೂರಿನಿಂದ ಹಾರನಹಳ್ಳಿಗೆ ತೆರಳುತ್ತಿದ್ದರು. ಗಾಯಾಳು ಯುವಕ ಗುರುಕಿರಣ್ ಚಾಮೇನಹಳ್ಳಿಯಿಂದ ಆಯನೂರು ಕಡೆಗೆ ತೆರಳುತ್ತಿದ್ದನು.
ನಿನ್ನೆ ಅಂದರೆ ಶುಕ್ರವಾರ ತಡರಾತ್ರಿಕ ಕೋಟೆ ಬಳಿಯಲ್ಲಿ ವೇಗವಾಗಿ ಬಂದ ಎರಡು ಬೈಕ್’ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಯುವಕರು ರಸ್ತೆಗೆ ಬಿದ್ದ ವೇಳೆ ಅಪರಿಚಿತ ವಾಹನವೊಂದು ಅವರ ಮೇಲೆ ಹರಿದಿದೆ. ಪರಿಣಾಮವಾಗಿ ಇಬ್ಬರು ಯುವಕರ ಸ್ಥಳದಲ್ಲೇ ಅತ್ಯಂತ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕುಂಸಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















