ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಜ.22ರಂದು ಅಯೋಧ್ಯೆಯಲ್ಲಿ Ayodhya ಪ್ರಾಣಪ್ರತಿಷ್ಠಾನೆಗೊಳ್ಳುವ ರಾಮಲಲ್ಲಾ Ramalalla ವಿಗ್ರಹದ ಪೂರ್ಣ ಫೋಟೋವನ್ನು ಬಹಿರಂಗಪಡಿಸಿರುವವ ವಿರುದ್ಧ ತನಿಖೆ ಮಾಡಿಸಲು ರಾಮ ಜನ್ಮಭೂಮಿ ಟ್ರಸ್ಟ್ ಮುಂದಾಗಿದೆ.
ಈ ಕುರಿತಂತೆ ಮಾತನಾಡಿರುವ ಶ್ರೀರಾಮಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್ ಅವರು, ಹೊಸ ವಿಗ್ರಹ ಇರುವಲ್ಲಿ ಪ್ರಾಣ ಪ್ರತಿಷ್ಠೆಯ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಸದ್ಯಕ್ಕೆ ಮೂರ್ತಿಯ ದೇಹವನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಪ್ರಾಣ ಪ್ರತಿಷ್ಠಾಪನೆಗೆ ಮುನ್ನ ವಿಗ್ರಹದ ಕಣ್ಣುಗಳನ್ನು ಬಹಿರಂಗಪಡಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ನಮ್ಮ ಧಾರ್ಮಿಕ ಆಚರಣೆಯಲ್ಲಿ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ದೇವರ ವಿಗ್ರಹದ ಕಣ್ಣನ್ನು ಮುಚ್ಚಲಾಗಿರುತ್ತದೆ. ತೆರೆಯಲು ಅವಕಾಶವಿಲ್ಲ. ಆದರೆ, ರಾಮಲಲ್ಲಾನ ಪೂರ್ಣ ವಿಗ್ರಹದ ಫೋಟೋವನ್ನು ಸೋರಿಕೆ ಮಾಡಿದ್ದು ಯಾರು ಎಂಬ ಪ್ರಶ್ನೆ ಮೂಡಿದೆ ಎಂದಿದ್ದಾರೆ.
Also read: ಬೀದಿನಾಯಿಗಳಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ರೈಲಿಗೆ ಡಿಕ್ಕಿ | ಇಬ್ಬರು ಮಕ್ಕಳ ಸಾವು
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ರಾಮ್ ಲಲ್ಲಾ ವಿಗ್ರಹ ಫೋಟೋವನ್ನು ದೇವಾಲಯದ ಸ್ಥಳದಲ್ಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಬಿಡುಗಡೆ ಮಾಡಿರಬಹುದು ಎಂದು ಟ್ರಸ್ಟ್ ಶಂಕಿಸಿದೆ. ರಾಮಲಾಲಾ ಫೋಟೋ ವೈರಲ್ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಟ್ರಸ್ಟ್ ಮುಂದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post