ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಪ್ರಾಣಪ್ರತಿಷ್ಠಾಪನೆಗೊಂಡು ಸಾರ್ವಜನಿಕರಿಗೆ ಮುಕ್ತರಾದ ನಂತರ ಮೊದಲ ದಿನ ಬರೋಬ್ಬರಿ 5 ಲಕ್ಷ ಭಕ್ತರು ಅಯೋಧ್ಯೆ ಬಾಲರಾಮನ Ayodhya Baalarama ದರ್ಶನ ಪಡೆದಿದ್ದಾರೆ.
ಮೊದಲ ದಿನೇ ಶ್ರೀರಾಮನ ದರ್ಶನ ಮಾಡಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದು, ಈ ವೇಳೆ ನೂಕುನುಗ್ಗಲು ಉಂಟಾಗಿತ್ತು.
ಮೊದಲ ದಿನ ಮಧ್ಯಾಹ್ನದ ವೇಳೆ ಸುಮಾರು 2.5 ರಿಂದ 3 ಲಕ್ಷ ಜನರು ದರ್ಶನ ಮಾಡಿದ್ದು, ರಾತ್ರಿ ವೇಳೆ ಅಂದಾಜು 5 ಲಕ್ಷ ಜನರು ಮೊದಲ ದಿನ ರಾಮನ ದರ್ಶನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Also read: 29ನೇ ಮಹಡಿಯಿಂದ ಹಾರಿ 12 ವರ್ಷದ ಬಾಲಕಿ ಆತ್ಮಹತ್ಯೆ
ಐಎಎಸ್ ಮ್ಯಾಜಿಸ್ಟ್ರೇಟ್ ನೇಮಕ
ಮೊದಲ ದಿನ ರಾಮನ ದರ್ಶನಕ್ಕೆ ಬರುತ್ತಿರುವ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಜನರು ಹರಿದುಬರುತ್ತಿರುವ ಸಂಖ್ಯೆಗೆ ಅಧಿಕಾರಿಗಳು ಅಕ್ಷರಶಃ ಸುಸ್ತಾಗಿ ಹೋಗಿದ್ದಾರೆ.
ಭಕ್ತರ ಸಂಖ್ಯೆಗೆ ಗಂಟೆ ಗಂಟೆಗೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಕ್ತರ ಸಂದಣಿ ನಿಯಂತ್ರಿಸಲು ರಾಮಮಂದಿರಕ್ಕೆಂದೇ ಒಬ್ಬ ಐಎಎಸ್ ದರ್ಜೆಯ ಮ್ಯಾಜಿಸ್ಟ್ರೇಟರನ್ನೂ ನೇಮಿಸಲಾಗಿದೆ. ಜನಸಂದಣಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಆತುರವಾಗಿ ಅಯೋಧ್ಯೆಗೆ ಬಾರದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರತಿನಿತ್ಯ ರಾಮನ ದರ್ಶನಕ್ಕೆ ಅವಕಾಶವಿರುವ ಹಿನ್ನೆಲೆಯಲ್ಲಿ ಆತುರ ಮಾಡಿಕೊಳ್ಳದೇ ಆಗಮಿಸಿ ದರ್ಶನ ಪಡೆಯುವಂತೆ ಕೋರಲಾಗಿದೆ.
ಈ ನಡುವೆ ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಕೆಲವು ಸಂಚಾರ ಮಾರ್ಗಗಳಲ್ಲಿಬದಲಾವಣೆ ತಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post