ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಜ.22ರಂದು ಪ್ರಾಣ ಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನ Ayodhya Baalarama ವಿಗ್ರಹವನ್ನು ಗರ್ಭಗುಡಿಯ ಪೀಠದ ಮೇಲೆ ನಿನ್ನೆ ರಾತ್ರಿ ಇರಿಸಲಾಗಿದ್ದು, ಇದರ ಫೋಟೋಗಳು ಹೊರಬಿದ್ದಿವೆ.
ರಾಮಲಲ್ಲಾ ವಿಗ್ರಹವನ್ನು ನಿನ್ನೆ ಗರ್ಭಗುಡಿಯ ಪೀಠದ ಮೇಲೆ ಇರಿಸಲಾಗಿದ್ದು, ವಸ್ತ್ರದಿಂದ ಮುಚ್ಚಲಾಗಿದೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೃಷ್ಣಶಿಲೆಯಿಂದ ಕೆತ್ತನೆ ಮಾಡಿದ ಸುಮಾರು 150-200 ಕೆಜಿ ತೂಕದ ಈ ವಿಗ್ರಹವನ್ನು ಬುಧವಾರ ಸಂಜೆ ಬಿಗಿ ಭದ್ರತೆಯ ಮೂಲಕ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತರಲಾಗಿತ್ತು. ಆನಂತರ ಗರ್ಭಗುಡಿಯಲ್ಲಿ ಇರಿಸಲಾಗಿದೆ.

Also read: ಅಯೋಧ್ಯೆಗೆ ಉಗ್ರರ ಕರಿನೆರಳು? ಮೂವರು ಅನುಮಾನಾಸ್ಪದರ ಬಂಧನ | ಹೈ ಅಲರ್ಟ್
ಗುರುವಾರ ಸಂಜೆ ವೇಳೆಗೆ ಧಾರ್ಮಿಕ ವಿಧಿ ವಿಧಾನಗಳು ನೇರವೇರಿದ ಬಳಿಕ ಕೃಷ್ಣಶಿಲೆಯಲ್ಲಿ ಮೂಡಿದ 5 ವರ್ಷದ ರಾಮನ 51 ಇಂಚು ಎತ್ತರದ ಬಾಲರಾಮನ ಮೂರ್ತಿಯನ್ನು ಇರಿಸಲಾಯಿತು.
ಜ.22ರಂದು ಪ್ರಧಾನಿ ನರೇಂದ್ರ ಮೋದಿ PM Narendra Modi ಅವರ ಯಜಮಾನತ್ವದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post