ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಜ.22ರಂದು ಪ್ರಾಣಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾನ Ayodhya Ramalalla ಮುಖದ ಹತ್ತಿರದ ಹಾಗೂ ಮೂರ್ತಿಯ ಪೂರ್ಣ ಫೋಟೋವನ್ನು ಬಿಡುಗಡೆ ಮಾಡಲಾಗಿದೆ.
ಈ ಕುರಿತಂತೆ ಮಂದಸ್ಮಿತನಾದ ಮರ್ಯಾದ ಪುರುಷೋತ್ತಮನ ಪೂರ್ಣ ಫೋಟೋ ಈಗ ಬಹಿರಂಗಗೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಏನೆಲ್ಲಾ ಇದೆ ಪ್ರಭಾವಳಿಯಲ್ಲಿ?
ರಾಮ್ ಲಲ್ಲಾನ ವಿಗ್ರಹವು ಓಂ, ಗಣೇಶ, ಚಕ್ರ, ಶಂಖ, ಗದಾ, ಸ್ವಸ್ತಿಕ್, ಹನುಮಾನ್ ಮತ್ತು ಕಮಲಾ ನಯನ ಸೇರಿದಂತೆ ವಿವಿಧ ಧಾರ್ಮಿಕ ಚಿಹ್ನೆಗಳನ್ನು ಹೊಂದಿದೆ.
ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, UP CM Yogi Adithyanath 4,000 ಕ್ಕೂ ಹೆಚ್ಚು ಸಂತರು ಸೇರಿದಂತೆ 7,500 ಕ್ಕೂ ಹೆಚ್ಚು ಗಣ್ಯ ಅತಿಥಿಗಳು ಸೋಮವಾರ ನಡೆಯಲಿರುವ ಭಗವಾನ್ ರಾಮಲಲ್ಲಾ ವಿಗ್ರಹದ ಭವ್ಯವಾದ ‘ಪ್ರಾಣ ಪ್ರತಿಷ್ಠಾ’ದಲ್ಲಿ ಪಾಲ್ಗೊಳ್ಳಲಿದ್ದಾರೆ.
Also read: ಜ.22ರಂದು ಪ್ರಾಣಪ್ರತಿಷ್ಠೆ ದಿನ ಅಯೋಧ್ಯೆಯಲ್ಲಿ ಹೇಗಿರಲಿದೆ ಹವಾಮಾನ?
ಸಾವಿರಾರು ಕುಶಲಕರ್ಮಿಗಳು, ಸಾಂಸ್ಕೃತಿಕ ಕಲಾವಿದರು ನಗರದಲ್ಲಿ ವಾಸ್ತವ್ಯ ಹೂಡಿರುವುದರಿಂದ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲು ಅಯೋಧ್ಯೆಯನ್ನು ಅಲಂಕರಿಸಲಾಗಿದೆ.
ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಮುಂಬರುವ ದಿನಗಳಲ್ಲಿ ಆಗಮಿಸುವ ಲಕ್ಷಗಟ್ಟಲೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲು ನಗರದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post