Read - < 1 minute
ನವದೆಹಲಿ: ರಾಮ ಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ 1994ರ ತೀರ್ಪನ್ನೇ ಎತ್ತಿ ಹಿಡಿದಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ಪ್ರಕರಣದ ಅಂತಿಮ ತೀರ್ಪು ಅತಿ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆಯಿದೆ.
ಇಂದಿನ ತೀರ್ಪು ಹಿಂದೂಗಳ ಪಾಲಿಗೆ ಐತಿಹಾಸಿಕವಾಗಿದ್ದು, ಇದು ಹಲವು ರೀತಿಯ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ.. ಇದರಲ್ಲಿ ಕೆಲವು ಪ್ರಮುಖಾಂಶಗಳು ಇಂತಿವೆ:
- ಮೊಟ್ಟ ಮೊದಲನೆಯದಾಗಿ ಇಂದಿನ ತೀರ್ಪಿನ ಹಿನ್ನೆಲೆಯಲ್ಲಿ ಅಯೋಧ್ಯೆ ಪ್ರಕರಣದ ಅಂತಿಮ ತೀರ್ಪು ಶೀಘ್ರದಲ್ಲೇ ಹೊರಬೀಳಲಿದೆ.
- ಕಾನೂನು ತಜ್ಞರ ಪ್ರಕಾರ 2019 ಲೋಕಸಭಾ ಚುನಾವಣೆಗೂ ಮುನ್ನವೇ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಯಿದೆ
- ನಮಾಜ್‌ಗೆ ಮಸೀದಿ ಅವಶ್ಯತೆಯಿಲ್ಲ ಎಂದು ನ್ಯಾಯಾಲಯ ಹೇಳಿರುವ ಹಿನ್ನೆಲೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಾದಿ ಸುಗಮವಾಗಿದೆ
- ಅಂತಿಮ ತೀರ್ಪು ಬಹುತೇಕ ಹಿಂದೂಗಳ ಪರವಾಗಿ ಬರುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ಸ್ಥಳ ಹಿಂದೂಗಳಿಗೆ ಹಸ್ತಾಂತರವಾಗುತ್ತದೆ
- ಇಂದಿನ ತೀರ್ಪಿನ ಪರಿಣಾಮ ಅಂತಿಮ ತೀರ್ಪು ಶೀಘ್ರ ಹೊರಬಿದ್ದರೆ, ತ್ವರಿತಗತಿಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ
- ರಾಮ ಮಂದಿರ ನಿರ್ಮಾಣದ ಕನಸು ಕಂಡಿರುವ ಬಿಜೆಪಿಗೆ ರಾಜಕೀಯವಾಗಿ ಭರ್ಜರಿ ಲಾಭವಾಗಲಿದೆ
- 2019ರ ಚುನಾವಣೆಯಲ್ಲಿ ಬಿಜೆಪಿಗೆ ಮತಗಳಿಗೆ ಮಹತ್ವದ ಹಾದಿಯಾಗಲಿದೆ
Discussion about this post