ನವದೆಹಲಿ: ಅಯೋಧ್ಯೆ ರಾಮ ಮಂದಿರ ವಿವಾದದ ಅಂತಿಮ ತೀರ್ಪು ಅತ್ಯಂತ ಶೀಘ್ರ ಹೊರಬೀಳಲು ಪ್ರಮುಖ ಮೈಲಿಗಲ್ಲಿನ ತೀರ್ಪುನ್ನು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸಿದ್ದು, ದಶಕಗಳ ಈ ವಿವಾದ ಬಗೆ ಹರಿಯುವ ಕಾಲ ಸನ್ನಿಹಿತವಾಗುತ್ತಿದೆ.
ಇಂದು ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ, ಮುಸಲ್ಮಾನರಿಗೆ ನಮಾಜ್ ಮಾಡಲು ಮಸೀದಿ ಅವಶ್ಯತೆಯಿಲ್ಲ. ಮುಸಲ್ಮಾನರಿಗೆ ಮೆಕ್ಕಾ ಹಾಗೂ ಮದೀನ ಮಾತ್ರ ಪವಿತ್ರ ಸ್ಥಳ. ನಮಾಜ್‌ಗಾಗಿ ಮಸೀದಿಯೇ ಆಗಬೇಕೆಂದೇನು ಇಸ್ಲಾಂನಲ್ಲಿ ನಿಯಮವಿಲ್ಲ ಎಂದು ಹೇಳುವ ಮೂಲಕ ಮಹತ್ವದ ತೀರ್ಪು ನೀಡಿದೆ.
ಪ್ರಮುಖವಾಗಿ, ಮಸೀದಿಯನ್ನು ಎಲ್ಲಿ ಬೇಕಾದರೂ ನಿರ್ಮಿಸಿಕೊಳ್ಳಬಹುದು. ಆದರೆ, ರಾಮ ಜನ್ಮ ಭೂಮಿಯನ್ನು ಬದಲಾವಣೆ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದಿದೆ.
ತೀರ್ಪಿಗೂ ಮುನ್ನ ನಡೆದ ವಾದ ವಿವಾದದ ಪ್ರಮುಖಾಂಶಗಳು ಹೀಗಿವೆ:
ಹಿಂದೂಗಳ ವಾದ
ಅಯೋಧ್ಯೆ ಮೂಲತಃ ರಾಮಜನ್ಮ ಭೂಮಿಯಾಗಿದೆ
ಕೋಟ್ಯಂತರ ಹಿಂದೂಗಳ ಪವಿತ್ರ ಕ್ಷೇತ್ರವಾಗಿದೆ ಅಯೋಧ್ಯೆ
ಹಿಂದೂಗಳಿಗೆ ಇದೊಂದು ಸ್ಥಳಮಾತ್ರವಲ್ಲ, ಭಾವನಾತ್ಮಕ ಸಂಬಂಧ
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದಿಂದ ಸಮಸ್ಯೆ ಪರಿಹಾರ
ಮುಸಲ್ಮಾನರ ವಾದ
ಅಯೋಧ್ಯೆಯಲ್ಲಿ ವಿವಾದಕ್ಕೂ ಮೊದಲೇ ಮಸೀದಿಯಿತ್ತು
ಅಲ್ಲಿನ ಮಸೀದಿ ಮುಸಲ್ಮಾನರ ಪ್ರಾರ್ಥನ ಸ್ಥಳ
1528ರಿಂದಲೇ ಅಯೋಧ್ಯೆಯಲ್ಲಿ ಮಸೀದಿ ಇತ್ತು
















