ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ರಾಮಲಲ್ಲಾನ Ramalalla ಪ್ರಾಣ ಪ್ರತಿಷ್ಠಾಪನೆ ನಡೆಯುವ ಜನವರಿ 22ರಂದು ಅಯೋಧ್ಯೆಯಲ್ಲಿ ಚಳಿಯಿಂದ ಕೂಡಿದ ಬಿಸಿಲಿನ ವಾತಾವರಣ ಇರುವ ಸಾಧ್ಯತೆ ದಟ್ಟವಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ Metrological Department ಹೇಳಿದೆ.
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುವ ಪವಿತ್ರ ದಿನದಂದು ಅಯೋಧ್ಯೆಯಲ್ಲಿ ಕನಿಷ್ಠ (ರಾತ್ರಿ) ತಾಪಮಾನ 6-8 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ (ದಿನ) ತಾಪಮಾನ ಸುಮಾರು 15-17 ಡಿಗ್ರಿ ಸೆಲ್ಸಿಯಸ್ ಎಂದು ಮುನ್ಸೂಚನೆ ನೀಡಿದೆ.
ಅಯೋಧ್ಯೆಗಾಗಿ ಪ್ರತ್ಯೇಕ ಪೋರ್ಟಲ್
ರಾಮಮಂದಿರ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ ಮೂರು ದಿನ ಬಾಕಿಯಿರುವಂತೆಯೇ ಅಯೋಧ್ಯೆಯ ಹವಾಮಾನ ಕುರಿತು ಮಾಹಿತಿ ಪ್ರಕಟಿಸಲು ಪ್ರತ್ಯೇಕ ಪೋರ್ಟಲನ್ನು ಕೇಂದ್ರ ಹವಾಮಾನ ಇಲಾಖೆ ಆರಂಭಿಸಿದೆ.
Also read: ಅಬ್ಬಬ್ಬಾ! ರಾಮನ ಪ್ರಾಣಪ್ರತಿಷ್ಠೆಗಾಗಿ ಪ್ರಧಾನಿ ಮೋದಿ ಎಷ್ಟು ಕಠಿಣ ವ್ರತ ಮಾಡುತ್ತಿದ್ದಾರೆ ಗೊತ್ತಾ?
ತಾಪಮಾನ ಮುನ್ಸೂಚನೆಗಳು, ಮಳೆ, ಆರ್ದ್ರತೆ ಮತ್ತು ಗಾಳಿಯ ಮಾದರಿಗಳ ಮಾಹಿತಿಯನ್ನು ಈ ಪೋರ್ಟಲ್ ನೀಡುತ್ತದೆ. ಇದು ಹಿಂದಿ, ಇಂಗ್ಲೀಷ್, ಉರ್ದು, ಚೈನೀಸ್, ಫ್ರೆಂಚ್ ಮತ್ತು ಸ್ಪಾö್ಯನಿಷ್ ಸೇರಿದಂತೆ ಪ್ರಮುಖ ಭಾಷೆಗಳಲ್ಲಿ ಜನವರಿ 17 ರಿಂದ ಜನವರಿ 24 ರವರೆಗೆ ಮುನ್ಸೂಚನೆಯನ್ನು ನೀಡುತ್ತದೆ.
ಇದರೊಂದಿಗೆ, ಏಳು ದಿನಗಳ ಮುನ್ಸೂಚನೆ ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವನ್ನು ಒಳಗೊಂಡಿರುವ ಹವಾಮಾನ ಬುಲೆಟಿನ್ ಸಹ ಬಳಕೆದಾರರಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ.
ಈ ಪೋರ್ಟಲ್ ಪ್ರಯಾಗ್ರಾಜ್, ವಾರಣಾಸಿ, ಲಕ್ನೋ ಮತ್ತು ನವದೆಹಲಿ ಸೇರಿದಂತೆ ಇತರ ನಗರಗಳ ಹವಾಮಾನ ಮಾಹಿತಿಯನ್ನು ಸಹ ಒಳಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post