ಕಲ್ಪ ಮೀಡಿಯಾ ಹೌಸ್ | ಬಾಗಲಕೋಟೆ |
ಬಾಗಲಕೋಟೆಯ ಮುಧೋಳ ನಗರದಲ್ಲಿ ಮಗನೇ ತನ್ನ ತಂದೆಯನ್ನು ಕೊಂದು 20 ತುಂಡುಗಳಾಗಿ ಕತ್ತರಿಸಿ, ಕೊಳವೆ ಬಾವಿಗೆ ಬಿಸಾಡಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪರಶುರಾಮ ಕುಳಲಿ (54) ಮೃತ ವ್ಯಕ್ತಿಯಾಗಿದ್ದು, ಇವರ ಮಗ ವಿಠ್ಠಲ ಕುಳಲಿ (21) ಹತ್ಯೆ ಮಾಡಿರುವ ಆರೋಪಿಯಾಗಿದ್ದಾನೆ.
ತಂದೆ ಕುಡಿದ ಮತ್ತಿನಲ್ಲಿ ಪ್ರತಿದಿನ ಮಗನಿಗೆ ಬೈಯ್ಯೋದು, ಹಲ್ಲೆ ಮಾಡೋದು ಮಾಡುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ಮಗ, ಕಬ್ಬಿಣದ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿ, ನಂತರ ಮೃತದೇಹವನ್ನು ಕೊಳವೆ ಬಾವಿಗೆ ಹಾಕಲು ಪ್ರಯತ್ನಿಸಿದ್ದಾನೆ. ಕೊಳವೆ ಬಾವಿಗೆ ದೇಹ ಇಳಿಯದೇ ಇದ್ದಾಗ, ಕೊಡಲಿಯಿಂದ ತುಂಡು ತುಂಡಾಗಿ ಕತ್ತರಿಸಿ, ನಂತರ ಕೊಳವೆ ಬಾವಿಗೆ ಹಾಕಿ ಹೋಗಿದ್ದಾನೆ ಎನ್ನಲಾಗಿದೆ.
ಡಿ.6ರ ಮಂಗಳವಾರ ಹತ್ಯೆ ನಡೆದಿದೆ ಎನ್ನಲಾಗಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಜೆಸಿಬಿಯಿಂದ ಕೊಳವೆ ಬಾವಿ ಅಗೆದು ಮೃತದೇಹದ ಭಾಗಗಳನ್ನ ಪೊಲೀಸರು ಹೊರ ತೆಗೆದಿದ್ದಾರೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















