ಕಲ್ಪ ಮೀಡಿಯಾ ಹೌಸ್ | ಬಾಗಲಕೋಟೆ |
ಮದುವೆ #Marriage ಸಂಭ್ರಮದಲ್ಲಿದ್ದ ವರ ತಾಳಿ ಕಟ್ಟಿದ ಕೆಲವೇ ಸಮಯದಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ #Death of Groom ಘಟನೆ ಬಾಗಲಕೋಟೆ #Bagalakote ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.
ಪ್ರವೀಣ್ ಕುರಣಿ ಮೃತ ವರ. ಇಂದು ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರವೀಣ್ ಕುರಣಿ ಹಾಗೂ ಪೂಜಾ ಎಂಬವರ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಆದರೆ ಆರತಕ್ಷತೆ ಮುಗಿಯುವಷ್ಟರಲ್ಲಿ ಮಧುಮಗ ಪ್ರವೀಣ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಪ್ರವೀಣ್ ರಾಜ್ಯ ಸೈಕ್ಲಿಂಗ್ ಕಾರ್ಯದರ್ಶಿ ಶ್ರೀಶೈಲ ಕುರಣಿ ಅವರ ಪುತ್ರ. ಹಸೆಮಣೆ ಏರಿ ವಿಭಿನ್ನ ಕನಸುಗಳನ್ನು ಕಂಡಿದ್ದ ಪ್ರವೀಣ್ ದಿಢೀರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಘಟನೆಯಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಪ್ರವೀಣ್ ರಾಜ್ಯ ಸೈಕ್ಲಿಂಗ್ ಕಾರ್ಯದರ್ಶಿ ಶ್ರೀಶೈಲ ಕುರಣಿ ಅವರ ಪುತ್ರ. ಹಸೆಮಣೆ ಏರಿ ವಿಭಿನ್ನ ಕನಸುಗಳನ್ನು ಕಂಡಿದ್ದ ಪ್ರವೀಣ್ ದಿಢೀರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಘಟನೆಯಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















