ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಕರ್ನಾಟಕ ವಿಧಾನಸಭೆ ಚುನಾವಣೆ-2023 ಪ್ರಯುಕ್ತ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ಗಳು ಮತ್ತು ಬಾವುಟಗಳನ್ನು ಆಳವಡಿಸಿದ್ದಲ್ಲಿ ತೆರವುಗೊಳಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶಿಸಿದ್ದಾರೆ.
ಸಾರ್ವಜನಿಕ ಸ್ಥಳಗಳು ಮತ್ತು ತೆರೆದ ಸ್ಥಳಗಳು (ಸಾರ್ವಜನಿಕರ ಪ್ರವೇಶವಿರುವ ಅಥವಾ ಆಶ್ರಯಿಸುವ ಹಕ್ಕು ಇರುವ ಅಥವಾ ಹಾದು ಹೋಗಲು ಹಕ್ಕು ಇರುವ ರಸ್ತೆ, ಬೀದಿ, ರಸ್ತೆ ಮಾರ್ಗ, ನಿಲುಗಡೆ ಪ್ರದೇಶಗಳು) ಖಾಸಗಿ ಸ್ಥಳ ಅಥವಾ ಸ್ಮಾರಕ, ಪ್ರತಿಮೆ, ಪೋಸ್ಟ್, ಗೋಡೆ ಬರಹ, ಮರಗಳಲ್ಲಿ ವ್ಯಕ್ತಿಗಳಿಗೆ ಕಾಣಿಸುವ ರೀತಿ ಜಾಹಿರಾತು ಪ್ರದರ್ಶಿಸುವುದು, ಜಾಹೀರಾತುಗಳನ್ನು ಮತ್ತು ಹೋರ್ಡಿಂಗ್ಸ್‍ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.

Also read: ವಿಶೇಷ ಆಸಕ್ತಿಯೊಂದಿಗೆ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಸಂಸದ ರಾಘವೇಂದ್ರ
ರಾಜ್ಯದಲ್ಲಿ 2023ರ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣಾ ಪ್ರಕ್ರಿಯೆಯು ಜಾರಿಯಲ್ಲಿದ್ದು, ವಿವಿಧ ರಾಜಕೀಯ ಪಕ್ಷಗಳಿಂದ ಚುನಾವಣಾ ಪ್ರಚಾರಕ್ಕಾಗಿ ನಡೆಸುತ್ತಿರುವ ಸಭೆ, ಯಾತ್ರೆ, ಕಾರ್ಯಕ್ರಮಗಳಲ್ಲಿ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ಗಳು ಮತ್ತು ಬಾವುಟಗಳನ್ನು ಅನಧಿಕೃತವಾಗಿ ಅಳವಡಿಸುತ್ತಿರುವುದು ಕಂಡುಬಂದಿರುತ್ತದೆ. ಇನ್ನು ಮುಂದೆ ನಡೆಯುವ ರಾಜಕೀಯ ಪಕ್ಷಗಳ ಸಭೆ, ಪ್ರಚಾರ ಕಾರ್ಯಕ್ರಮಗಳಲ್ಲಿ ಅಳವಡಿಸುವ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ಗಳು ಮತ್ತು ಬಾವುಟಗಳ ಕುರಿತು ಪರಿಶೀಲಿಸಿ ಕ್ರಮವಹಿಸಲು ಸೂಚಿಸಲಾಗಿದೆ.











Discussion about this post