ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜಕೀಯ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಪಾಲ್ಗೊಳ್ಳುವುದನ್ನು ನಿಷೇಧಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಾಮಾಜಿಕ ಸಂಘಟನೆಯಲ್ಲ. ಬದಲಾಗಿ ರಾಜಕೀಯ ಸಂಘಟನೆಯೇ ಆಗಿದೆ. ಹೀಗಾಗಿ, ಸರ್ಕಾರಿ ನೌಕರರು ಆರ್’ಎಸ್’ಎಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಬೇಕು ಎಂದವರು ಅಭಿಪ್ರಾಯಪಟ್ಟರು.
ಇನ್ನು, ಸರ್ಕಾರಗಳನ್ನು ತೆಗೆಯುವಲ್ಲಿ, ಸರ್ಕಾರ ರಚನೆ ಮಾಡುವಲ್ಲಿ, ಮಂತ್ರಿ ಮಂಡಳ ರಚನೆಯಲ್ಲಿ ಆರ್’ಎಸ್’ಎಸ್ ನಾಯಕರು ಭಾಗಿಯಾಗುತ್ತಾರೆ. ಚುನಾವಣೆಯಲ್ಲೂ ಸಂಘದ ನಾಯಕರು ಸ್ಪರ್ಧಿಸುತ್ತಾರೆ. ಈ ಕಾರಣಕ್ಕೆ ಸರ್ಕಾರಿ ನೌಕರರು ಆರ್’ಎಸ್’ಎಸ್ ಚಟುವಟಿಕೆಯಲ್ಲಿ ಭಾಗವಹಿಸುವುದನ್ನು ನಿಷೇಧಿಸಬೇಕು ಎಂದರು.
ಮುಖ್ಯಮಂತ್ರಿಗಳಿಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದು ಸರಿಯಾಗಿದೆ. ಆರ್’ಎಸ್’ಎಸ್ ಅನ್ನು ಅಧಿಕೃತವಾಗಿ ನಿಷೇಧಿಸಬೇಕು. ರಾಜಕೀಯ ಸಂಘಟನೆಯ ಚಟುವಟಿಕೆಗೆ ಸರ್ಕಾರಿ ಜಾಗದಲ್ಲಿ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post