ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಬೆಳಗಾವಿ |
ಸಚಿವೆ ಲಕ್ಷ್ಮಿ ಅವರ ಕಾರು ಅಪಘಾತ ಪ್ರಕರಣಕ್ಕೆ #Lakshmi Hebbalkar Car Accident ಮಹತ್ವದ ತಿರುವು ದೊರೆತಿದ್ದು, ಅಪರಿಚಿತ ಕಂಟೇನರ್ ಟ್ರಕ್ ಚಾಲಕನ ವಿರುದ್ದ ದೂರು ದಾಖಲಾಗಿದೆ.
ಸಚಿವರ ಕಾರು ಚಲಾಯಿಸುತ್ತಿದ್ದ ಚಾಲಕ ಶಿವಪ್ರಸಾದ್ ಅವರು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಅಪರಿಚಿತ ಕಂಟೇನರ್ ಟ್ರಕ್ ವಿರುದ್ಧ ದೂರು ದಾಖಲಿಸಿದ್ದಾರೆ.

Also read: ಶಿವಮೊಗ್ಗ | ಕಠಿಣ ವ್ರತ ಆಚರಿಸಿ ಶಬರಿಮಲೆಗೆ ತೆರಳಿದ ಅಯ್ಯಪ್ಪ ಮಾಲಾಧಾರಿಗಳು
ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿಯ ಧಾರವಾಡ-ಬೆಳಗಾವಿ ಮಧ್ಯದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಾಗುತ್ತಿದ್ದ ವೇಳೆ, ಮುಂದಿನ ಲೈನ್ 1ರಲ್ಲಿ ಸಾಗುತ್ತಿದ್ದ ಕಂಟೈನರ್ ಟ್ರಕ್ ಚಾಲಕ ಯಾವುದೇ ಮುನ್ಸೂಚನೆ ನೀಡದೇ ಎಡ ಬದಿಗೆ ಬಂದಿದ್ದಾನೆ. ಆಗ ಎಡ ಬದಿಗೆ ಕಾರನ್ನು ತೆಗೆದುಕೊಂಡಿದ್ದೇವೆ. ಆದರೂ ಟ್ರಕ್ ಚಾಲಕ ಕಾರಿನ ಬಲ ಭಾಗಕ್ಕೆ ತಾಗಿಸಿದ್ದೇನೆ. ಇದರಿಂದಾಗಿ ಕಾರು ನಿಯಂತ್ರಣ ತಪ್ಪಿ ಸರ್ವೀಸ್ ರಸ್ತೆಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತ ಮಾಡಿದ ನಂತರ ವಾಹನ ನಿಲ್ಲಿಸದೇ ಟ್ರಕ್ ಡ್ರೈವರ್ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಕೇಸ್ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post