ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರಿನ ಗುರುದತ್ತ ಬಡಾವಣೆಯಲ್ಲಿ ಸಂಜೆ 5 ಗಂಟೆಯಿಂದ 5 ಗಂಟೆ 5 ನಿಮಿಷಗಳ ಕಾಲ ಮೊಳಗಿದ ಗಂಟೆ ನಾದ, ಶಂಖ ನಾದ, ಜಾಗಂಟೆಯ ಸದ್ದು ಮತ್ತು ಚಪ್ಪಾಳೆ ತಟ್ಟಿ ಕರೊನಾ ವೈರಸ್ ಅನ್ನು ಸದ್ದಡಗಿಸುವ ಕಾರ್ಯಕ್ಕೆ ಮುನ್ನುಡಿ ಬರೆಯಲಾಯಿತು.
ಇಂತಹ ಒಂದು ಐತಿಹಾಸಿಕ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಕರೆಗೆ ನಗರದ ಬನಶಂಕರಿ 3 ನೆಯ ಹಂತದ ಹೊಸಕೆರೆಹಳ್ಳಿಯ ಗುರುದತ್ತ ಬಡಾವಣೆಯ ಪುಟ್ಟ ಬಾಲಕ ಚಿರಂತ್ ಸ್ಪಂದಿಸಿದ್ದು ಶಂಖ ಊಧಿ ಧನ್ಯವಾದ ಅರ್ಪಿಸಿದ್ದಾನೆ.
ಶ್ರೀಮತಿ ಮಾನಸಾ ಹಾಗೂ ಸಂತೋಷ್ ಅವರ ಸುಪುತ್ರ ಚಿರಂತ್ ಏಳು ವರ್ಷದ ಬಾಲಕ. ಲಿಟಲ್ ಫ್ಲವರ್ ಸ್ಕೂಲ್’ನಲ್ಲಿ 1 ನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವನಿಗೆ ಚೆಸ್, ಬ್ಯಾಡ್ಮಿಂಟನ್, ಶ್ಲೋಕಗಳನ್ನು ಪಟಪಟನೆ ಹೇಳುವ ಈಗ ಬಹುಮುಖ ಪ್ರತಿಭೆ.
ಚಿಕ್ಕ ವಯಸ್ಸಿನಲ್ಲಿ ಅದ್ಬುತವಾಗಿ ಶಂಖ ಊದು ಈ ಬಾಲಕ ಪ್ರಧಾನಿಯವರ ಕರೆಗೆ ಸ್ಪಂದಿಸಿರುವುದು ಪ್ರಶಂಸೆಗೆ ಪಾತ್ರವಾಗಿದೆ.
ಇನ್ನು, ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಬೆಂಗಳೂರು ನಗರದ ನಾನಾ ಭಾಗಗಳಲ್ಲಿ ಅಮೋಘವಾಗಿ ಸ್ಫಂದಿಸಿದರು. ಜನತೆ ಸಂಜೆ 5 ಗಂಟೆ ವೇಳೆಗೆ ಮನೆಯ ಮುಂದೆ, ಮೇಲೆ, ರಸ್ತೆಗಳಲ್ಲಿ ನಿಂತು ಸಾಮೂಹಿಕವಾಗಿ ಚಪ್ಪಾಳೆ ಬಾರಿಸುತ್ತಾ, ಜಾಗಂಟೆ, ತಟ್ಟೆ, ಘಂಟೆಗಳನ್ನು ಬಾರಿಸುತ್ತ ಶಂಖವನ್ನು ಊದುವ ಮೂಲಕ ಕರೋನಾ ವೈರಸ್ ವಿರುದ್ಧ ಹೋರಾಡುತ್ತಾ ನಾಗರಿಕರ ಆರೋಗ್ಯ ರಕ್ಷಣೆಗೆ ನಿರತರಾಗಿರುವ ಆರೋಗ್ಯ ಇಲಾಖೆ, ಮತ್ತಿತರ ಇಲಾಖೆಯ ಕಾರ್ಯಕ್ಕೆ ಬೆಂಬಲ ಸೂಚಿಸಿ ಕೃತಜ್ಞತೆ ಅರ್ಪಿಸಿದರು.
Get in Touch With Us info@kalpa.news Whatsapp: 9481252093
Discussion about this post