ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಸಿನಿ ಪ್ಯಾಲೇಸ್ ಸ್ಟುಡಿಯೋ ನಿರ್ಮಿಸಿರುವ ಪ್ರೇಮಿಯ ಪ್ರೀತಿ , ತಂದೆಯ ನೀತಿ ಇದುವೇ’ಬ್ರ್ಯಾಂಡೆಡ್ ಲವ್’ ವಿಶೇಷತೆ ಹೊಂದಿರುವ ಯುವ ಪ್ರತಿಭೆಗಳೇ ಸೇರಿರುವ ಕಿರುಚಿತ್ರ ಇದೀಗ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ.
ಹೆತ್ತ ಮಗನ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಕನಸುಗಳನ್ನು ಮಗನ ಆಸೆಗಳ ಮೇಲೆ ಹೇರಿ ಪುತ್ರನ ಚಿಗುರುಗನಸನ್ನು ಹೊಸಕಿ ಹಾಕುತ್ತಾನೆ. ಆದರೆ ಬೆಳೆದು ದೊಡ್ಡವನಾದ ಮಗನು ತಂದೆಯ ಮಮತೆ ಅರಿಯದೆ ವಯೋಸಹಜ ಪ್ರೇಮಕ್ಕೆ ವ್ಯಾಮೋಹಿತನಾಗಿ ತನ್ನ ತಂದೆಯ ಅಪೇಕ್ಷೆಗಳನ್ನು ಗಾಳಿಗೆ ತೂರಿ ತನ್ನಾಸೆಯಂತೆ ಬದುಕಲು ಬಿಡದ ತಂದೆಯನ್ನು ವಿರೋಧಿಸಿ ನಡೆದು ಮುಂದೊಂದು ದಿನ ಪ್ರೇಯಸಿಯ ಪ್ರೇಮ ವೈಫಲ್ಯದಿಂದ, ತಂದೆಯ ಅನುರಾಗ ಹಂಬಲಿಸಿ ಬಂದಾಗ, ಪ್ರೀತಿ ನೀಡೋ ತಂದೆಯೇ ಮರೆಯಾಗಿರುತ್ತಾನೆ.
ಕೇವಲ ಸ್ಟೈಲ್, ಶೋಕಿ ಎಂದು ನಡೆದು ಅಮೂಲ್ಯವಾದ ಸಮಯ ಕಳೆದ ಮಗನಿಗೆ ಕಾಲವು ತನ್ನ ಮೌಲ್ಯವನ್ನು ತಿಳಿಸಿ ಅವನಿಗೆ ಬೇಕಾದ ನಿಜವಾದ ಪ್ರೀತಿಯನ್ನು ಒದಗಿಸಿ ಆ ಪ್ರೀತಿಗೆ ತನ್ನದೇ ಆದ ನೈತಿಕ ಮೌಲ್ಯಗಳನ್ನು, ಪವಿತ್ರತೆಯನ್ನು ಹಾಗೂ ನಿಜವಾದ ಜೀವನಾನುಭವವನ್ನು ನೀಡುತ್ತದೆ. ಇಲ್ಲಿ ಸಿದ್ದು ಅವರ ಕಥೆ-ಚಿತ್ರಕಥೆ-ಸಂಭಾಷಣೆ -ಸಾಹಿತ್ಯ ಜೊತೆಗೆ ನಿರ್ದೇಶನ ಅದ್ಭುತವಾಗಿ ಮೂಡಿಬಂದಿದೆ.
ಇಂದಿನ ಯುವ ಜನಾಂಗಕ್ಕೆ ಅನಿವಾರ್ಯವಾದ ಹಾಗೂ ಪರಿಣಾಮಕಾರಿಯಾದ ಸಂದೇಶವನ್ನು ಇ ಕಿರುಚಿತ್ರ ನೀಡಿದೆ. ಈ ಕಿರುಚಿತ್ರ ಯುವಪೀಳಿಗೆ ಅಷ್ಟೇ ಅಲ್ಲ ಎಲ್ಲ ಜನಸಾಮಾನ್ಯರ ಮನಸ್ಸನ್ನು ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ. ತಾರಾಬಳಗದಲ್ಲಿ ನಾಯಕಿಯಾಗಿ ಸುಪ್ರೀತಾ, ತಂದೆ ಪಾತ್ರದಲ್ಲಿ ಮೈಕೋ ಮಂಜು, ತಂದೆಯ ಸ್ನೇಹಿತರ ಪಾತ್ರದಲ್ಲಿ ಹುಬ್ಬಳ್ಳಿಯ ಜನಪ್ರಿಯ ಕಲಾವಿದರಾದ ಸಿದ್ಧರಾಜ್ ಕಲ್ಯಾಣಕರ, ವೆಂಕಟೇಶರಾವ್, ಸ್ನೇಹಿತೆಯ ಪಾತ್ರದಲ್ಲಿ ಚಿತ್ರಾ, ಸ್ನೇಹಿತನ ಪಾತ್ರದಲ್ಲಿ ಉಮಾಪತಿ, ಶಿವು ಸಿರಿಗೆರೆ, ರಮೇಶ್ ಭಟ್, ದೀಪು ಸೋಮರಾಜ್, ಕಲಾಯೋಗಿ, ಸಂತೋಷ ಕುಲಕರ್ಣಿ, ಮೋಹನ್ ಎಂ.ಎಸ್, ಜಿತೇಶ್ ಡಿ ಗೌಡ, ಅಭಿಷೇಕ್ ಎಂ ಮುರುಡ, ಮುಂತಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಮನು ಬಿ.ಕೆ ಛಾಯಾಗ್ರಹಣ, ಅಕ್ಷಯ್ ರಿಷಬ್ ಸಂಗೀತ, ಭರಾಟೆ ಖ್ಯಾತಿಯ ಪ್ರಮೋದ ಸೋಮರಾಜು ಸಂಕಲನ, ವಿಎಫ್ ಎಕ್ಸ್ ದರ್ಶನ್ ಶೆಟ್ಟಿ, ಕಲರಿಸ್ಟ್ ಅಮೀತ್, ಎಸ್ ಎಫ್ ಎಕ್ಸ್ ಅಹೋರಾತ್ರ ಸ್ಟುಡಿಯೋಸ್ ಮಿಕ್ಸಿಂಗ್ ಹಾಗೂ ಮಾಸ್ಟರಿಂಗ್ ಅರವಿಂದ್ ಮೆನನ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಗಿ, ಪ್ರಚಾರ ಕಲೆ ವಿಶ್ವಪ್ರಕಾಶ ಟಿ ಮಲಗೊಂಡ, ನಿರ್ದೇಶನ ವಿಭಾಗದಲ್ಲಿ ಸಂದೀಪ್ ಬಿ.ಯು. ಆನಂದ ಕಾಂತಿ, ಪ್ರಶಾಂತ್, ಮೇಕಪ್ ಅನೀಲ್ ಹಾಗೂ ಅರುಣ ಮುಂತಾದ ತಾಂತ್ರಿಕ ವರ್ಗ ಕಿರುಚಿತ್ರಕ್ಕಿದೆ. ಈ ಕಿರುಚಿತ್ರಕ್ಕೆ ಪತ್ರಿಕೆಯ ಬಳಗ, ಮಾಧ್ಯಮದವರು, ಹಿರಿಕಿರಿಯರ ಪ್ರೋತ್ಸಾಹ ದೊರೆಯಲಿ ಎಂಬುದು ನಮ್ಮ ಆಶಯ ಎಂದು ಈಗಾಗಲೇ ‘ಮಿಸ್ಟರ್ ಜೈ’ ಎನ್ನುವ ಕಿರುಚಿತ್ರ ನಿರ್ದೇಶಿಸಿ ಯಶಸ್ಸನ್ನು ಗಳಿಸಿರುವ ಈ ಕಿರುಚಿತ್ರದ ನಿರ್ದೇಶಕ ಸಿದ್ದು ಹೇಳುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















Discussion about this post