ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಳೆದ ಹಲವು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಹಾಗೂ ರಾಜ್ಯದ ರಾಜಕಾರಣದಲ್ಲಿ ಗುರುತಿಸಿಕೊಂಡು ಹಾಲಿ ಸಮಾಜವಾದಿ ಪಾರ್ಟಿಯಲ್ಲಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾಗಿ ತೊಡಗಿಸಿಕೊಂಡು ಪಾರ್ಟಿಯ ಸಂಘಟನೆ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದ ನಾಗರಾಜ ನಾಯ್ಕ, ಪುನೀತ್ ರಾಜಕುಮಾರ್ Puneeth Rajkkumar ರವರ ಆದರ್ಶಗಳನ್ನು ಪಾಲಿಸುವುದಕ್ಕಾಗಿ ರಾಜಕೀಯಕ್ಕೆ ರಾಜೀನಾಮೆ ನೀಡಿದ್ದಾರೆ.
ಈಗ ರಾಜಕೀಯವನ್ನು ಬಿಟ್ಟು ಸಂಪೂರ್ಣವಾಗಿ ಪುನೀತ್ ರಾಜಕುಮಾರ್ ಸರ್ ರವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕೆನ್ನುವ ತೀರ್ಮಾನವನ್ನು ಕೈಗೊಂಡಿದ್ದೇನೆ. ಪುನೀತ್ ರಾಜಕುಮಾರ್ ಸರ್ ಕೂಡ ಯಾವುದೇ ರಾಜಕೀಯ ಪಾರ್ಟಿಯಲ್ಲಿ ಗರುತಿಸಿಕೊಂಡಿರಲಿಲ್ಲ. ಪುನೀತ್ ರಾಜಕುಮಾರ್ ಸರ್ ಹಾಕಿಕೊಟ್ಟ ಮಾರ್ಗವಾದ (ಅಪ್ಪುವಾದ) ಪ್ರೀತಿ ಸರಳತೆ, ಉಪಕಾರ, ಸಹಾಯ, ಮಾರ್ಗದರ್ಶನ, ದೇಶಾಭಿಮಾನ ಇವುಗಳೇ ನಮ್ಮ ಮೂಲ ಉದ್ದೇಶವಾಗಿಟ್ಟುಕೊಂಡು, ಹಾಗೂ ನಾವು ನಗುವುದು ಇತರರನ್ನು ನಗಿಸುವುದು, ನಾವು ಉತ್ತವಾಗಿ ಬದುಕುವುದು ಇತರರನ್ನು ಉತ್ತಮವಾಗಿ ಬದುಕಲು ಪ್ರೊತ್ಸಾಹಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಅವರ ಅಭಿಮಾನಿಯಾಗಿ ಅವರ ಆದರ್ಶಗಳನ್ನು ಅಂದರೆ ಅಪ್ಪುವಾದ ಅಳವಡಿಸಿಕೊಂಡು ಹೋಗಬೇಕಾಗಿ ಇರುವುದರಿಂದಾಗಿ ಸಮಾಜ ಸೇವೆಯಲ್ಲಿ ಮುಂದುವರಿಯುತ್ತಿದ್ದೇನೆ. ಆದರೆ ಈ ಮೂಲಕ ನಾನು ರಾಜಕೀಯಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಸಮಾಜವಾದಿ ಪಾರ್ಟಿಗೆ ಹಾಗೂ ಸಮಾಜವಾದಿ ಪಾರ್ಟಿಯ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಈ ಮೂಲಕ ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ. ಇಲ್ಲಿಯವರೆಗು ನನಗೆ ಪ್ರೊತ್ಸಾಹಿಸಿ, ಮಾರ್ಗದರ್ಶನ ನೀಡಿ ಸಕರಿಸಿದ ತಮ್ಮೆಲ್ಲರಿಗೂ ವಂದನೆಗಳು ಎಂದು ನಾಗರಾಜ ನಾಯ್ಕ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post