ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಕನ್ನಡ ಭಾಷೆ ಮತ್ತು ಕರ್ನಾಟಕದ ಏಳಿಗೆಗೆ ಶ್ರಮಿಸಿ ಬೆಂಗಳೂರು ನಗರದಲ್ಲಿ ಹಲವು ಕೆರೆಗಳನ್ನು ನಿರ್ಮಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ನಡೆದ ಕೆಂಪೇಗೌಡರ 512ನೇ ಜಯಂತಿಯ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ವೈಜ್ಞಾನಿಕವಾಗಿ ನಗರ ನಿರ್ಮಾಣ ಮಾಡುವ ದೂರದೃಷ್ಟಿ ಹೊಂದಿದ್ದ ನಾಡಪ್ರಭು ಕೆಂಪೇಗೌಡ ನದಿ ಮೂಲವೇ ಇಲ್ಲದ ಬೆಂಗಳೂರನ್ನು ಕಟ್ಟಿ ವಿಶ್ವಕ್ಕೆ ಐತಿಹಾಸಿಕ ಮಾದರಿಯಾಗಿ ಉಳಿದುಕೊಂಡಿದ್ದಾರೆ ಎಂದರು.
ಒಂದು ನಗರ ಹೇಗಿರಬೇಕೆಂಬ ಸ್ಪಷ್ಟ ಕಲ್ಪನೆ ಕೆಂಪೇಗೌಡರಿಗೆ ಇತ್ತು. ಇಂತಹ ದೂರದೃಷ್ಟಿಯಿಂದ ನದಿಮೂಲ ಇಲ್ಲದ ಒಂದು ನಗರ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಆ ಮೂಲಕ ಕೆಂಪೇಗೌಡರು ಇಂದಿಗೂ ಅವರ ಆಡಳಿತ, ನಗರ ನಿರ್ಮಾಣದ ಪ್ಲಾನಿಂಗ್ ಅವರ ದೂರದೃಷ್ಟಿ ಹಲವಾರು ಅಂಶಗಳನ್ನು ಇಂದಿನ ಸರಕಾರಗಳು ಅವಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಒಂದು ನಗರ ಹೇಗಿರಬೇಕು ಅಲ್ಲಿನ ಕಸುಬುಗಳು ಹಾಗೂ ಜನಗಳ ಬದುಕಿನ ರೀತಿಗೆ ಹೊಂದಿಕೊಳ್ಳುವ ರೀತಿ ಅರಿವಿದ್ದ ಕೆಂಪೇಡಗೌಡರು ಬೆಂಗಳೂರನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ. ಜಾತ್ಯಾತೀತವಾಗಿ ಎಲ್ಲಾ ಸಮುದಾಯಗಳ ಕುಲ ಕಸುಬುಗಳ ಆಧಾರದ ಮೇಲೆ ಪ್ರತಿ ಬೀದಿಗಳನ್ನು ನಿರ್ಮಾಣ ಮಾಡಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ ಕೃಷ್ಣಮೂರ್ತಿ, ಮಾಜಿ ಪುರಸಭೆ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಆರ್. ಪ್ರಸನ್ನಕುಮಾರ್ ಮತ್ತು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಪರಶುರಾಮ ಪುರದ ಕೇಶವಮೂರ್ತಿ ಹಾಗೂ ಮುಖಂಡರಾದ ಹೆಗ್ಗೆರೆ ಆನಂದಪ್ಪ, ತಾಲ್ಲೂಕು ಕಚೇರಿ ಅಧಿಕಾರಿ ಶ್ರೀನಿವಾಸ್, ಒಕ್ಕಲಿಗರ ಸಂಘದ ಪಾದಾಧಿಕಾರಿಗಳು ಮುಖಂಡರುಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post