ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇ. 61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಒಟ್ಟು 5,99,794 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 4,02,697 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಗ್ರಾಮಾಂತರ ಪ್ರದೇಶದ ಫಲಿತಾಂಶ ಉತ್ತಮವಾಗಿದೆ. ನಗರಪ್ರದೇಶದಲ್ಲಿ 61.78, ಗ್ರಾಮಾಂತರ 62.18ರಷ್ಟಿದೆ ಎಂದು ತಿಳಿಸಿದರು.
ಪರೀಕ್ಷೆಗೆ ಹಾಜರಾದ 3, 37, 006 ಬಾಲಕಿಯರ ಪೈಕಿ 2,31,586 ಮಕ್ಕಳು ಉತ್ತೀರ್ಣರಾಗಿದ್ದಾರೆ. 3,46,557 ಬಾಲಕರ ಪೈಕಿ 1,91,380 ವಿದ್ಯಾರ್ಥಿಗಳು ಉತ್ತಿಣರಾಗಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಪ್ರಥಮ (88.2), ದ್ವಿತೀಯ ಉಡುಪಿ (86.38), ತೃತೀಯ ವಿಜಾಪುರ (77.14) ಮತ್ತು ಚಿತ್ರದುರ್ಗ (49.31) ಕೊನೆಯ ಸ್ಥಾನದಲ್ಲಿ.
ವಿಭಾಗವಾರು ಫಲಿತಾಂಶದಲ್ಲಿ ವಿಜ್ಞಾನ, (72.53), ವಾಣಿಜ್ಯ (64.97), ಕಲಾ ವಿಭಾಗ (58.71)ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮರು ಪರೀಕ್ಷೆ ತೆಗೆದುಕೊಂಡಿರುವ 14.403 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
91,169 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 2,14,115 ಮಂದಿ ಪ್ರಥಮ ದರ್ಜೆ ಮತ್ತು 49, 301 ಮಂದಿ ದ್ವಿತೀಯ ದರ್ಜೆ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 56 ಕಾಲೇಜುಗಳಿಗೆ ಶೇ. 100 ಫಲಿತಾಂಶ ಬಂದಿದೆ ಎಂದರು.
ಇನ್ನು ಗಣಿತ ವಿಷಯದಲ್ಲಿ 14,200 ವಿದ್ಯಾರ್ಥಿಗಳು ಔಟ್ ಆಪ್ ಔಟ್ ಅಂಕ ಪಡೆದಿದ್ದಾರೆ. ಇಂಗ್ಲಿಷ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದು, ಕನ್ನಡದಲ್ಲಿ 563 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದುಕೊಂಡಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ Kseeb.kar.nic.in, pue.kar.nic.in ಅಥವಾ www.karresults.nic.in ವೆಬ್ ಸೈಟ್‌ಗಳಿಗೆ ಭೇಟಿ ನೀಡಿ ಫಲಿತಾಂಶ ಪಡೆಯಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post