ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ #DCM D K Shivakumar ಅವರನ್ನು ಭೇಟಿಯಾದ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ಅವರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂರು ಪ್ರಮುಖ ವಿಚಾರಗಳನ್ನು ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿಗಳನ್ನು ಭೇಟಿಯಾದ ಶಾಸಕರು, ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂರು ಪ್ರಮುಖ ಮನವಿ ಮಾಡಿದ್ದಾರೆ.
ಮನವಿ-1: ಶಿವಮೊಗ್ಗ ನಗರದ ಮದರಿಪಾಳ್ಯದ ಶ್ರೀ ಕಲ್ಲೇಶ್ವರ ದೇವಸ್ಥಾನದ ಪಕ್ಕ ಹಾದು ಹೋಗುವ ತುಂಗಾ ನದಿಯ ಪ್ರವಾಹದಿಂದ ನಾಗರೀಕರ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯಾಗುತ್ತಿದ್ದು, ಇದರ ರಕ್ಷಣೆಗಾಗಿ ತುಂಗಾ ನದಿಯ ಬಲದಂಡೆಗೆ ಸುಮಾರು 100 ಮೀಟರ್ ಉದ್ದಕ್ಕೆ ರಕ್ಷಣಾ ಗೋಡೆಯನ್ನು ನಿರ್ಮಾಣ ಮಾಡಲು ಕರ್ನಾಟಕ ನೀರಾವರಿ ನಿಗಮ ನಿಯಮಿತ ಶಿವಮೊಗ್ಗ ಇವರಿಗೆ ಅನುದಾನವನ್ನು ಬಿಡುಗಡೆ ಮಾಡಲು ಕೋರಲಾಯಿತು.
Also read: ಫಸ್ಟ್ ಬೌಲ್’ನಲ್ಲೇ ಸಿಕ್ಸರ್ ಹೊಡೆದ ಡಾ.ಧನಂಜಯ ಸರ್ಜಿ | ಅಂಕಿಅಂಶ ಸಹಿತ ಚರ್ಚೆಗೆ ಸದನದ ಪ್ರಶಂಸೆ
ಮನವಿ-2: ಭದ್ರಾ ಜಲಯಾನ ಪ್ರದೇಶದಲ್ಲಿ ಮಳೆಯ ನೀರುಕೆರೆ ಕಟ್ಟಿ ತುಂಬಿ ಭದ್ರಾ ಎಡದಂಡೆ ಕಾಲುವೆ ಮುಖಾಂತರ ಹರಿದು ಶಿವಮೊಗ್ಗ ನಗರದ ಅನೇಕ ಬಡಾವಣೆಗಳಲ್ಲಿ ನೀರು ನುಗ್ಗಿ ಪ್ರವಾಹ ಉಂಟಾಗಿ ಅನೇಕ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯಾಗುತ್ತಿದ್ದು, ನಾಳೆ ಹೆಚ್ಚುವರಿ ನೀರನ್ನು ಹೊರಗೆ ಹರಿದು ಬಿಡಲು ಬೀಡುಗುಂಡಿಗಳು ಲಭ್ಯವಿರದ ಕಾರಣ, ಭದ್ರಾ ಎಡದಂಡೆ ಕಾಲುವೆಯಲ್ಲಿ ಬೀಡುಗುಂಡಿಗಳನ್ನು ನಿರ್ಮಾಣಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡಲು ಕೋರಲಾಯಿತು.
ಮನವಿ-3: ತುಂಗಾ ಮೇಲ್ದಂಡೆ ಯೋಜನೆಯಲ್ಲಿ ನಿಗಮದ ಜಾಗವನ್ನು ಒತ್ತುವರಿ ಮಾಡುವುದಲ್ಲದೆ ಜಾಗವನ್ನು ಕಬಳಿಸಲು ಪ್ರಯತ್ನಿಸುತ್ತಿರುವುದರಿಂದ ಸರದಿ ಕಾಲುವೆಯ ಎರಡು ಬದಿಗಳಲ್ಲಿ ಚೈನೇಜ್ 10,000 ಕಿಲೋಮೀಟರ್ ರಿಂದ ಚೈನೇಜ್ 21,000 ಕಿಲೋಮೀಟರ್ ವರೆಗೆ (ಒಟ್ಟು 22 ಕಿಲೋಮೀಟರ್) Brabed GI wire fencing ಮತ್ತು ಚೇನ್ ಲಿಂಕ್ ಫೆನ್ಸಿಂಗ್ ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡಲು ಕೋರಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post