ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೊರೋನಾ ಆತಂಕದ ನಡುವೆಯೇ ನಡೆದ ಎಸ್’ಎಸ್’ಎಲ್’ಸಿ ಪರೀಕ್ಷಾ ಫಲಿತಾಂಶ ಘೋಷಣೆಯಾಗಿದ್ದು, ಓರ್ವ ವಿದ್ಯಾರ್ಥಿ ಹೊರತಾಗಿ ಎಲ್ಲರೂ ಪಾಸಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಪರೀಕ್ಷಾ ಫಲಿತಾಂಶ ಘೋಷಣೆ ಮಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಈ ಬಾರಿ ಶೇ.99.9ರಷ್ಟು ಫಲಿತಾಂಶ ದಾಖಲಾಗಿದೆ ಎಂದರು.
ಶೇ.99.65ರಷ್ಟು ಅಂದರೆ 8,76,581 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಗ್ರೇಡ್ ಆಧಾರದಲ್ಲಿ ಎಲ್ಲರೂ ಪಾಸಾಗಿದ್ದಾರೆ. 4,01,281 ಬಾಲಕಿಯರು, 4,72,643 ಬಾಲಕರು ಪಾಸಾಗಿದ್ದಾರೆ.
1,28,931 ವಿದ್ಯಾರ್ಥಿಗಳು ಎ ಪ್ಲಸ್, 2,50,317 ವಿದ್ಯಾರ್ಥಿಗಳು ಎ ಗ್ರೇಡ್, 2,87,684 ವಿದ್ಯಾರ್ಥಿಗಳು ಬಿ ಗ್ರೇಡ್’ನಲ್ಲಿ ಉತ್ತೀರ್ಣರಾಗಿದ್ದಾರೆ.
ಶೇ.99.65ರಷ್ಟು ಅಂದರೆ 8,76,581 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಗ್ರೇಡ್ ಆಧಾರದಲ್ಲಿ ಎಲ್ಲರೂ ಪಾಸಾಗಿದ್ದಾರೆ. 4,01,281 ಬಾಲಕಿಯರು, 4,72,643 ಬಾಲಕರು ಪಾಸಾಗಿದ್ದಾರೆ.
1,28,931 ವಿದ್ಯಾರ್ಥಿಗಳು ಎ ಪ್ಲಸ್, 2,50,317 ವಿದ್ಯಾರ್ಥಿಗಳು ಎ ಗ್ರೇಡ್, 2,87,684 ವಿದ್ಯಾರ್ಥಿಗಳು ಬಿ ಗ್ರೇಡ್ ಹಾಗೂ 1,13,610 ವಿದ್ಯಾರ್ಥಿಗಳು ಸಿ ಗ್ರೇಡ್’ನಲ್ಲಿ ಉತ್ತೀರ್ಣರಾಗಿದ್ದಾರೆ.
157 ವಿದ್ಯಾರ್ಥಿಗಳು 625ಕ್ಕೆ 625, 289 ವಿದ್ಯಾರ್ಥಿಗಳು 625ಕ್ಕೆ 623, 2 ವಿದ್ಯಾರ್ಥಿಗಳು 621, 28 ವಿದ್ಯಾರ್ಥಿಗಳು 625ಕ್ಕೆ 620, 449 ವಿದ್ಯಾರ್ಥಿಗಳು 625ಕ್ಕೆ 621 ಅಂಕಗಳನ್ನು ಗಳಿಸಿದ್ದಾರೆ. ವಿಜ್ಞಾನದಲ್ಲಿ 3649 ವಿದ್ಯಾರ್ಥಿಗಳು, ಸಮಾಜದಲ್ಲಿ 9367, ಗಣಿತದಲ್ಲಿ 6321, ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ.
ಕೋವಿಡ್’ನಂತಹ ಸಂದರ್ಭದಲ್ಲಿ ರಾಷ್ಟ್ರದಲ್ಲಿ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಕರ್ನಾಟಕ ಸರ್ಕಾರ ವಿಶೇಷ ನಿರ್ಧಾರ ಕೈಗೊಂಡು ಪರೀಕ್ಷೆ ನಡೆಸಿತ್ತು. ವಿಶೇಷವಾಗಿ ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ದಿಟ್ಟ ನಿರ್ಧಾರ, ಅಂದಿನ ಸಿಎಂ ಯಡಿಯೂರಪ್ಪ ಅವರ ಬೆಂಬಲ ಹಾಗೂ ಅಧಿಕಾರಿಗಳು ಕೈಗೊಂಡಿದ್ದ ವ್ಯವಸ್ಥೆಯಿಂದಾಗಿ ಎಲ್ಲವೂ ಸುಲಲಿತವಾಗಿ ನಡೆದಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post