ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಸುಮಾರು ದಿನಗಳಿಂದ ಕೋವಿಡ್19 ಮಹಾಮಾರಿ ಸಾಂಕ್ರಾಮಿಕ ರೋಗ ವಿಶ್ವದಾದ್ಯಂತ ಹರಡುತ್ತಿದ್ದು, ಅನೇಕ ಬಡ ಕುಟುಂಬಗಳು ಕೆಲಸವಿಲ್ಲದೇ ಮನೆಯಲ್ಲೇ ಕುಳಿತು ಕೊಳ್ಳುವ ಹಾಗಾಗಿದೆ.
ಇದನ್ನರಿತ ಎಸ್. ಬಂಗಾರಪ್ಪ ಫೌಂಡೇಷನ್‌ನ ಮಧು ಬಂಗಾರಪ್ಪನವರ ಮಾರ್ಗದರ್ಶನದಲ್ಲಿ ಹೊಸಪೇಟೆ ಬಡಾವಣೆಯ ಅನೇಕ ಬಡ ವೃದ್ಧರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ತಾಲೂಕು ಆಡಳಿತ ಅಧಿಕಾರಿಗಳ ಸಮ್ಮುಖದಲ್ಲಿ ಮುಂಜಾಗೃತಾ ಕ್ರಮವಾಗಿ ರೋಗ ನಿರೋಧಕ ಆಹಾರ ಪದಾರ್ಥಗಳನ್ನು ಹಾಗೂ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ನಿರಂತರ ಸೇವೆಯಲ್ಲಿರುವ ಬಂಗಾರಪ್ಪ ಫೌಂಡೇಷನ್ ರವರಿಗೆ ವೃದ್ಧರು ಹಿರಿಯರು ಆಶೀರ್ವದಿಸಿದರು.
Get in Touch With Us info@kalpa.news Whatsapp: 9481252093
















