ಕಲ್ಪ ಮೀಡಿಯಾ ಹೌಸ್ | ಬಂಟ್ವಾಳ |
ತಾಲೂಕಿನ ನರಿಕೊಂಬು ಗ್ರಾಮದ ಪಿಡಿಓ ಒಬ್ಬರು ಬಾವಿ ಕಾಣೆಯಾಗಿದೆ, ಹುಡುಕಿ ಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇಲ್ಯಡ್ಕ ಎಂಬಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 2012-13ನೇ ಸಾಲಿನಲ್ಲಿ 73,305ರೂ. ಅನುದಾನದಲ್ಲಿ ಸಾರ್ವಜನಿಕವಾಗಿ ತೆರೆದ ಬಾವಿಯನ್ನು ಮಾಡಲಾಗಿತ್ತು. ಆದರೆ, ನೇಲ್ಯಡ್ಕ ನಿವಾಸಿ ದಯಾನಂದ ಪೂಜಾರಿ ಅವರು ಬಾವಿ ಮುಚ್ಚಿದ್ದಾರೆ ಎಂದು ಪೊಲೀಸ್ ಠಾಣೆಗೆ ಪಿಡಿಒ ಶಿವಗೊಂಡಪ್ಪ ಬಿರಾದರ್ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿ, ದಯಾನಂದ ಪೂಜಾರಿಯವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Also read: ವಿಶ್ವದಲ್ಲೇ ಅತಿ-ವೇಗವಾಗಿ ಚಾರ್ಜ್ ಆಗುವ ಹೊಸ ಬ್ಯಾಟರಿ ತಂತ್ರಜ್ಞಾನ ಲೋಕಾರ್ಪಣೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post