ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ಆತಂಕದ ನಡುವೆಯೇ ರಾಜ್ಯದಾದ್ಯಂತ ಬಾರ್, ಪಬ್ ಹಾಗೂ ರೆಸ್ಟೋರೆಂಟ್’ಗಳನ್ನು ಮಂಗಳವಾರದಿಂದ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಹೇಳಲಾಗಿದೆ.
ಈ ಕುರಿತಂತೆ ಸರ್ಕಾರ ನಾಳೆ ಆದೇಶ ಹೊರಡಿಸಲಿದೆ ಎಂದು ಹೇಳಲಾಗಿದ್ದು, ಬಾರ್, ಪಬ್, ರೆಸ್ಟೋರೆಂಟ್’ಗಳಲ್ಲೇ ಕುಡಿಯಲು ಅವಕಾಶ ಕಲ್ಪಿಸಲಿದೆ ಎನ್ನಲಾಗಿದೆ.
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಬ್ ಹಾಗೂ ಬಾರ್-ರೆಸ್ಟೋರೆಂಟ್’ಗಳನ್ನು ಕಳೆದ ಆರು ತಿಂಗಳಿನಿಂದ ಮುಚ್ಚಲಾಗಿತ್ತು. ಈಗ ಇದಕ್ಕೆ ಅನುಮತಿ ದೊರೆಯುವುದು ಬಹುತೇಕ ನಿಶ್ಚಿತವಾಗಿದೆ.
ಇನ್ನು, ಇಲ್ಲಿ ಕೆಲವೊಂದು ಷರತ್ತುಗಳನ್ನೂ ಸಹ ಸರ್ಕಾರ ವಿಧಿಸಲಿದ್ದು, ಏನು ಆ ಷರತ್ತುಗಳು ಎಂಬುದು ನಾಳೆ ಆದೇಶ ಹೊರಬಿದ್ದ ನಂತರ ತಿಳಿಯಲಿದೆ.
Get In Touch With Us info@kalpa.news Whatsapp: 9481252093
Discussion about this post