ಕಲ್ಪ ಮೀಡಿಯಾ ಹೌಸ್ | ಭಟ್ಕಳ |
ಶೈಕ್ಷಣಿಕ ಪ್ರವಾಸಕ್ಕೆಂದು ಮುರ್ಡೇಶ್ವರಕ್ಕೆ #Educationa Trip to Murdeshwara ತೆರಳಿದ್ದ ಕೋಲಾರದ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಭಟ್ಕಳದಲ್ಲಿ ಮತ್ತೊಂದು ದುರಂತ ನಡೆದಿದೆ.
ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಯೊಬ್ಬರ ಬಾವಿಗೆ ಬಿದ್ದು ಮೃತಪಟ್ಟಿರುವ #Student Death ದುರಂತ ಘಟನೆ ಭಟ್ಕಳದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಕೊಪ್ಪಳದ ಯಲಬುರ್ಗ ತಾಲೂಕಿನ ಗುಣದಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ ಎಂದು ಗುರುತಿಸಲಾಗಿದೆ.
ಭಟ್ಕಳದ ತಾಲೂಕು ಪಂಚಾಯ್ತಿ ಹತ್ತಿರದ ಮೆಡಿಕಲ್ ಶಾಪ್’ಗೆ ಬಂದಿದ್ದ ವಿದ್ಯಾರ್ಥಿ ಮೂತ್ರ ವಿಸರ್ಜನೆಗೆಂದು ಹೋದಾಗ ತಡೆಗೋಡೆ ಇಲ್ಲದ ಬಾವಿಗೆ ಬಿದ್ದಿದ್ದಾನೆ ಎಂದು ವರದಿಯಾಗಿದೆ.
Also read: ಸರ್ಕಾರದಿಂದ ಜವಾನ್ ಸಮ್ಮಾನ್ ಲೇಔಟ್ ನಿರ್ಮಾಣ | ಯಾರಿಗೆ ದೊರೆಯಲಿದೆ ನಿವೇಶನ?
ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಬಾಲಕನನ್ನು ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
100 ವಿದ್ಯಾರ್ಥಿಗಳು, 13 ಶಿಕ್ಷಕರೊಂದಿಗೆ 2 ಬಸ್ ಗಳಲ್ಲಿ ಪ್ರವಾಸಕ್ಕೆ ಬಂದಿದ್ದರು. ಅರಬೈಲ್ ಘಟ್ಟದ ಮಾರ್ಗವಾಗಿ ಕೊಲ್ಲೂರಿಗೆ ಹೊರಟಿದ್ದರು. ದಾರಿಮಧ್ಯೆ ಮಾತ್ರೆ ತರಲು ಭಟ್ಕಳದಲ್ಲಿ ಬಸ್ ನಿಲ್ಲಿಸಲಾಗಿದೆ. ಆಗ ವಿದ್ಯಾರ್ಥಿ ಮೂತ್ರವಿಸರ್ಜನೆಗೆಂದು ಹೋಗಿದ್ದಾಗ ಗೊತ್ತಾಗದೆ ತಡೆಗೋಡೆ ಇಲ್ಲದ ಬಾವಿಗೆ ಬಿದ್ದಿದ್ದಾನೆ. ಮೃತ ವಿದ್ಯಾರ್ಥಿಯ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿದೆ.
ಇತ್ತೀಚೆಗೆ ಮುರುಡೇಶ್ವರ ಬೀಚ್ ನಲ್ಲಿ ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟಿರುವ ದುರಂತ ಮಾಸುವ ಮುನ್ನವೇ ಮತ್ತೊಂದು ಜೀವ ಹೋಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post