ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಪಾವಗಡ ರಸ್ತೆ ಬಳಿ ಕೆಎಚ್‌ಬಿ ಬಡಾವಣೆಯಲ್ಲಿ ವಸತಿ ಹಂಚಿಕೆಯಲ್ಲಿ ಆಟೋ ಚಾಲಕರು ಹಾಗೂ ಹಮಾಲಿ ಕೂಲಿ ಕಾರ್ಮಿಕರನ್ನು ವಂಚಿಸಲಾಗಿದೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಪಿ. ತಿಪ್ಪೇಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
Also Read: ಧರ್ಮ ಬೇಕಾ? ಜೀವನಾ ಬೇಕಾ? ಜನರನ್ನು ಪ್ರಶ್ನಿಸಿದ ಎಚ್.ಡಿ. ಕುಮಾರಸ್ವಾಮಿ
ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ವಸತಿ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಮಾಡುವ ಮೂಲಕ ಸ್ಥಳೀಯ ಶಾಸಕರು ಹಾಗೂ ವಸತಿ ಸಚಿವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಸರ್ಕಾರ ಇದೆ ಎಂದು ಹೀಗೆ ಮಾಡೋದು ಸರಿನಾ ಎಂದು ಪ್ರಶ್ನಿಸಿದರು.
ಸರ್ವೆ ನಂ. 57 ರಲ್ಲಿ 15 ಎಕರೆ ಪ್ರದೇಶದಲ್ಲಿ ಆಟೋ ಚಾಲಕರು ಹಾಗೂ ಹಮಾಲಿ ಕೂಲಿ ಕಾರ್ಮಿಕರು ಸೇರಿದಂತೆ ಒಟ್ಟು 665 ಜನರಿಗೆ ನಿವೇಶನದ ಜತೆಗೆ ವಸತಿ ಹಂಚಿಕೆಯ ಬಾಬ್ತು 27 ಲಕ್ಷ ರೂ. ಪಾವತಿಸಬೇಕು ಎಂದು ಸರ್ಕಾರ ಆದೇಶಿಸಿದ್ದ ಕಾರಣ ಒಂದೇ ಸಲ ದೊಡ್ಡ ಮಟ್ಟದ ಹಣ ಪಾವತಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹಣ ಪಾವತಿಸಲು ಕಾಲಾವಕಾಶ ನೀಡಬೇಕು ಎಂದು ಹಮಾಲಿ ಕಾರ್ಮಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಮಧ್ಯೆಯೇ ವಸತಿ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿರುವುದು ಇದು ಯಾವ ನ್ಯಾಯ ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು. ಈಗಾಗಲೇ ಸಾಕಷ್ಟು ಖಾಲಿ ನಿವೇಶನ ವಿದ್ದರೂ ಹೀಗೆ ಮಾಡುತ್ತಿರುವುದು ಹಮಾಲಿ ಕೂಲಿಕಾರ್ಮಿಕರಿಗೆ ಅನ್ಯಾಯವಾಗುತ್ತದೆ ಎಂದರು.
ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ. ರವೀಶ್‌ಕುಮಾರ್, ಮಾತನಾಡಿ ಕೆಎಚ್‌ಬಿ ಬಡಾವಣೆಯ ವಸತಿಗೆ ಆಯ್ಕೆ ಮಾಡಿದ 1008 ಜನರಲ್ಲಿ ಕೇವಲ 92. ಜನ ಮಾತ್ರ ವಂತಿಕೆ ಪಾವತಿಸಿದ್ದಾರೆ. ಇನ್ನುಳಿದ 916 ಜನ ಫಲಾನುಭವಿಗಳು ವಂತಿಕೆ ಹಣ ಪಾವತಿಸಿಲ್ಲ. ಅರ್ಹ ಪ್ರತಿಯೊಬ್ಬ ಫಲಾನುಭವಿಗೂ ಪ್ರತ್ಯೇಕ ವಸತಿ ನಿರ್ಮಿಸಿಕೊಡಲು ಸಾಕಷ್ಟು ಭೂಮಿ ಇದೆ. ಹಾಗಾಗಿ ನಗರದ ಜನರಿಗೆ ಜಿ ಪ್ಲಸ್-೨ ಮನೆಯ ಅಗತ್ಯವಿರಲಿಲ್ಲ ದೊಡ್ಡ ದೊಡ್ಡ ನಗರಗಳಲ್ಲಿ ಬಡವರಿಗೆ ಇದೇ ತರಹ ಮನೆ ಕಟ್ಟಿಕೊಟ್ಟರೆ ಉಪಯೋಗವಾಗುತ್ತದೆ. ಆದರೆ ಸಾಕಷ್ಟು ನಿವೇಶನ ಇವೆ ಆದ್ದರಿಂದ ಹಮಾಲಿ ಕೂಲಿ ಕಾರ್ಮಿಕರಿಗೆ ಎಂದೇ ಮೀಸಲಿಟ್ಟಿದ್ದ ನಿವೇಶನವನ್ನು ಅವರಿಗೆ ನೀಡಿ ಎಂದರು.
Also Read: ಸಂಪುಟ ವಿಸ್ತರಣೆ-ಯಾವಾಗ ಏನು ಬೇಕಾದರೂ ಆಗಬಹುದು: ಕುತೂಹಲ ಮೂಡಿಸಿದ ಸಿಎಂ ಹೇಳಿಕೆ
ಬೆಂಗಳೂರಿನಲ್ಲಿ ನಡೆಯಲಿರುವ ಪಕ್ಷದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಹೋಗಲು ಕಾರ್ಯಕರ್ತರಿಗೆ 100 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ನಗರಸಭೆ ಪ್ರಮೋದ್, ಮಾತನಾಡಿ ವಸತಿಗಾಗಿ ಹಮಾಲಿ ಕಾರ್ಮಿಕರು 20 ವರ್ಷ ನಿರಂತರ ಹೋರಾಟ ನಡೆಸಿದ್ದರೂ ಅವರ ಕೂಗು ಯಾರಿಗೂ ಅರ್ಥವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಗರಸಭೆ ಕೆ.ಸಿ. ನಾಗರಾಜ, ಶ್ರೀನಿವಾಸ್ ಮುಖಂಡರಾದ ಹುಲಿಕುಂಟೆ ವೀರೇಂದ್ರಪ್ಪ, ಕೃಷ್ಣಮೂರ್ತಿ, ಸಿರಿಗೆ ಪ್ರಭು ಇತರರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post