ಕಲ್ಪ ಮೀಡಿಯಾ ಹೌಸ್ | ಬೀಜಿಂಗ್ |
ಇಲಿಯೊಂದು ತನ್ನ ಕೈ ಬೆರಳನ್ನು ಕಚ್ಚಿತು ಎಂದು ಅದರ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿ ಮುಂದಾದ ಯುವತಿಯೊಬ್ಬಳು ಆ ಇಲಿಗೇ ತಿರುಗಿ ಕಚ್ಚಿದ ವಿಚಿತ್ರ ಘಟನೆ ಚೀನಾದಲ್ಲಿ ನಡೆದಿದೆ.
ಇಂತಹ ವಿಚಿತ್ರ ಘಟನೆ ಕಳೆದ ತಿಂಗಳು ನಡೆದಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಇದರ ವೀಡಿಯೋ ವೈರಲ್ ಆದ ಬಳಿಕ ಹೊರಬಂದಿದೆ.
18 ವರ್ಷದ ಯುವತಿಯೊಬ್ಬಳ ಕೈ ಬೆರಳಿಗೆ ತಾನು ಕೆಲಸ ಮಾಡುತ್ತಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ಇಲಿಯೊಂದು ಕಚ್ಚಿದೆ. ಇದರಿಂದ ಸಿಟ್ಟಿಗೆದ್ದ ಯುವತಿ ಅದನ್ನು ಜೀವಂತ ಹಿಡಿಯಲು ಮುಂದಾಗಿ ಅದರಲ್ಲಿ ಯಶಸ್ವಿಯೂ ಸಹ ಆಗಿದ್ದಾರೆ.
Also read: ರಾಜ್ಯದಲ್ಲಿಯೂ ಕಾಂಗ್ರೆಸ್ ಅಂತ್ಯ ಕಾಣುವುದು ನಿಶ್ಚಿತ: ಬಸವರಾಜ ಬೊಮ್ಮಾಯಿ
ತಾನು ಜೀವಂತ ಹಿಡಿದ ಇಲಿಯ ಮೇಲೆ ಸೇಡು ತೀರಿಸಿಕೊಳ್ಳುವ ಸಿಟ್ಟಿನಲ್ಲಿ ಅದರ ತಲೆಯನ್ನು ಬಲವಾಗಿ ಕಚ್ಚಿದ್ದಾಳೆ. ಯುವತಿ ಕಚ್ಚಿದಕ್ಕಿಂತಲೂ ಅದರ ತಲೆಯನ್ನು ಬಿಗಿಯಾಗಿ ಹಿಡಿದ ಕಾರಣ ಉಸಿರುಗಟ್ಟಿ ಅದು ಸತ್ತು ಹೋಗಿದೆ ಎಂದು ವರದಿಯಾಗಿದೆ.
ಇನ್ನು ಇಲಿಯ ಮೇಲೆ ಸೇಡು ತೀರಿಸಿಕೊಳ್ಳುವ ಸಿಟ್ಟಿನಲ್ಲಿ ಆಕೆಯ ತುಟಿಗೂ ಸಹ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾಳೆ.
ಘಟನೆ ಕುರಿತಂತೆ ಚೀನಾದ ಪತ್ರಿಕೆಯೊಂದು ವರದಿ ಮಾಡಿದ್ದು, ವೈದ್ಯರ ಅಭಿಪ್ರಾಯದಂತೆ ಅವರ ವೃತ್ತಿಜೀವನದಲ್ಲಿ ಇಂತಹ ವಿಚಿತ್ರ ಘಟನೆ ನೋಡಿಯೇ ಇಲ್ಲ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post