ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಸಾಲವಾಗಿ ಕೊಟ್ಟ ಹಣ ಮರುಪಾವತಿಸದ ಹಿನ್ನೆಲೆ ಸ್ನೇಹಿತನ ಹತ್ಯೆಗೈದು #Murder ಪೊಲೀಸರಿಗೆ ಶರಣಾದ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ನಡೆದಿದೆ.
ಗಿರಿಯಾಲ ಗ್ರಾಮದ ಮಂಜುನಾಥ ಗೌಡರ (30) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.
ಮೃತ ಮಂಜುನಾಥ ಸ್ನೇಹಿತ ದಯಾನಂದ ಗುಂಡ್ಲೂರನಿಂದ ಕಳೆದ ವಾರ 2 ಸಾವಿರ ಹಣ ಸಾಲವನ್ನಾಗಿ ಪಡೆದಿದ್ದ. ಒಂದು ವಾರದೊಳಗೆ ಹಣ ಮರಳಿಸುವುದಾಗಿ ಹೇಳಿದ್ದ. ಅವಧಿ ಮುಗಿದ ಹಿನ್ನೆಲೆಯಲ್ಲಿ ಸಾಲ ಕೇಳಲು ದಯಾನಂದ ಮುಂದಾಗಿದ್ದ. ಇದೇ ಹಣದ ವಿಚಾರಕ್ಕೆ ಮಂಜುನಾಥ ಹಾಗೂ ದಯಾನಂದ ಮಧ್ಯೆ ಜಗಳ ಆಗಿದೆ. ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಮಂಜುನಾಥನನ್ನು ದಯಾನಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ರಾತ್ರಿ ನಡೆದ ಜಗಳದ ಸಿಟ್ಟಿನಲ್ಲೇ ಬೆಳಗಿನ ಜಾವ ಕೊಡ್ಲಿಯಿಂದ ಹೊಡೆದು ಮಂಜುನಾಥನ ಹತ್ಯೆ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಂಜುನಾಥ ಗೌಡರ ಉಸಿರು ಚಲ್ಲಿದ್ದಾನೆ. ಮಂಜುನಾಥ ಗೌಡರ ಸಾವನಪ್ಪಿರುವ ಸುದ್ದಿ ತಿಳಿದು ಪೊಲೀಸರಿಗೆ ಸ್ವಯಂ ಪ್ರೇರಿತವಾಗಿ ಹೋಗಿ ದಯಾನಂದ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















