ಕಲ್ಪ ಮೀಡಿಯಾ ಹೌಸ್ | ಬೆಳಗಾವಿ/ಶಿವಮೊಗ್ಗ |
ಪಶು ವರ್ಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಮಲೆನಾಡು ಗಿಡ್ಡ ತಳಿಯ ಬಗ್ಗೆ ಅಧ್ಯಯನ ಕೈಗೊಳ್ಳಲು ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯ #Vetenary Medical College, Shivamogga ಆವರಣದಲ್ಲಿ ಸ್ಥಾಪಿಸಿದ ಮಲೆನಾಡು ಗಿಡ್ಡ ತಳಿ #Malenaadu Gidda breed ಸಂಶೋಧನೆ ಹಾಗೂ ಮಾಹಿತಿ ಕೇಂದ್ರವನ್ನು ಪುನಹ ಪ್ರಾರಂಭಿಸಲು ಪಶು ಸಂಗೋಪನ ಸಚಿವರನ್ನು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ #D S Arun ಒತ್ತಾಯಿಸಿದರು.
ಪರಿಷತ್ ಕಲಾಪದಲ್ಲಿ ಮಾತನಾಡಿದ ಅವರು, ಮಲೆನಾಡು ಗಿಡ್ಡ ಗೋವು ತಳಿ ಭೌಗೋಳಿಕ ಮಾನ್ಯತೆ ಹೊಂದಿದೆ. ಪ್ರಮುಖವಾಗಿ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಈ ತಳಿ ಹೇರಳವಾಗಿ ಕಂಡುಬರುವಂತಾಗಿದೆ. ಈ ತಳಿಯ ಹಾಲಿನಲ್ಲಿ ಎ-2 ಕೆಸಿನ್ ಅಧಿಕವಿದ್ದು ಜಗತ್ತಿನಲ್ಲಿ ಕಡಿಮೆ ಕೊಲೆಸ್ಟಾçಲ್ ಅಂಶ ಹೊಂದಿರುವುದು ದೃಢಪಟ್ಟಿರುತ್ತದೆ ಎಂದು ತಿಳಿಸಿದರು.
Also read: ನೈಋತ್ಯ ರೈಲ್ವೆ | ನಾಲ್ವರು ಉದ್ಯೋಗಿಗಳಿಗೆ ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರದ ಗರಿ
ಮಲೆನಾಡು ಗಿಡ್ಡ ತಳಿಯ ಹಾಲು ಮತ್ತು ಅದರ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಹಾಲಿನಲ್ಲಿರುವ ಔಷಧೀಯ ಗುಣದ ಬಗ್ಗೆ ಹಾಗೂ ರೋಗ ನಿರೋಧಕ ಶಕ್ತಿಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಸಲುವಾಗಿ ಮಳೆನಾಡು ಗಿಡ್ಡೆತಳಿ ಸಂಶೋಧನೆಗೆ ಅನುಕೂಲವಾಗುವಂತೆ ಮಾಹಿತಿ ಕೇಂದ್ರವನ್ನು ಪುನರಾರಂಭಿಸಬೇಕು, ಸಂಶೋಧನೆಗೆ ಸರ್ಕಾರ ಹೆಚ್ಚಿನ ಒತ್ತುಕೊಟ್ಟು ಅಗತ್ಯವಿರುವ ಅನುದಾನವನ್ನು ಸಹ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post