ಕಲ್ಪ ಮೀಡಿಯಾ ಹೌಸ್
ಬೆಳಗಾವಿ: ಭಾರತೀಯ ಜನತಾ ಪಾರ್ಟಿ ಮತಕ್ಕಾಗಿ ಕೇವಲ ಲಿಂಗಾಯತ ಮತ್ತು ಮರಾಠಾ ಸಮಾಜವನ್ನು ಓಲೈಸುತ್ತಿದೆ. ನಮಗೆ ಎಲ್ಲರೂ ಬೇಕು. ಲಿಂಗಾಯತ, ಮರಾo ಎಲ್ಲರೂ ನಮ್ಮ ಸಹೋದರರೇ, ಪರಿಶಿಷ್ಠ ಜಾತಿ ಜನಾಂಗದವರೂ ನಮ್ಮವರೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜಾತಿ ಆಧಾರದ ಮೇಲೆ ಮತ ಕೇಳುವುದಿಲ್ಲ. ನಮಗೆ ಎಲ್ಲರೂ ಬೇಕು ಎಂದು ಹೇಳಿದರು.
ನಾನು ಬೆಳಗಾವಿಯಲ್ಲಿ ಹಲವಾರು ಹಿರಿಯರನ್ನು, ಮಠಾಧೀಶರನ್ನು ಭೇಟಿಯಾಗಿ ಮಾತನಾಡುತ್ತಿದ್ದೇನೆ, ಅವರ ಆಶೀರ್ವಾದ ಕೇಳುತ್ತಿದ್ದೇನೆ. ರೈತರೇ ಹೆಚ್ಚಾಗಿರುವ ಇಲ್ಲಿ ರೈತರ ಸ್ವಾಭಿಮಾನ ಕಾಪಾಡುವ ಕೆಲಸ ಆಗಬೇಕಿದೆ ಎಂದು ಶಿವಕುಮಾರ ಹೇಳಿದರು.
ಸಾರಿಗೆ ಸಂಸ್ಥೆಯ ನೌಕರರ ಬೇಡಿಕೆಗಳನ್ನು ಸರಕಾರ ಸಹಾನುಭೂತಿಯಿಂದ ಆಲಿಸಬೇಕು. ಅವರ ಬೇಡಿಕೆಗಳಿಗೆ ನಮ್ಮ ಬೆಂಬಲವಿದೆ ಎಂದು ಅವರು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post