ಕಾಗವಾಡ: ಬರಗಾಲದಿಂದ ತೀವ್ರ ಸಂಕಷ್ಟದಲ್ಲಿರುವ ಬೆಳಗಾವಿ ಜಿಲ್ಲೆಯ ಕಾಗವಾಡ ರೈತರು ತಮ್ಮ ಬೆಳೆ ಹಾಳಾಗಿರುವ ಚಿಂತೆಯಾದರೇ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ಮೇವಂತೂ ಮೊದಲೇ ಇಲ್ಲ. ಕುಡಿಯಲು ಸಹ ಹಲವೆಡೆ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಬಿಸಿಲಿನ ಧಗೆ ಹೆಚ್ಚಿದಂತೆ ನೀರಿನ ಸಮಸ್ಯೆಯು ಉಲ್ಬಣವಾಗಿದೆ. ಆದರೆ ಇದಕ್ಕೆ ಕಿವಿಗೊಡಬೇಕಾದ ಪ್ರಭುಗಳು, ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಚುನಾವಣೆ ಮುಗಿದರೂ ಇತ್ತ ಯಾರೂ ಮುಖ ಕೃಷ್ಣಾನದಿಯಿಂದ ನಂಬಿ ಬದುಕುತ್ತಿರುವ ರಾಯಭಾಗ, ಚಿಕ್ಕೋಡಿ, ಅಥಣಿ ಕಾಗವಾಡ, ಕೆಲವು ತಾಲೂಕು ಮತ್ತು ಗ್ರಾಮಗಳು ಇದೆ. ಕೃಷ್ಣ ನದಿಗೆ ಅವಲಂಭಿಸಿವೆ ಸುಮಾರು ಒಂದು ತಿಂಗಳು ಗತಿಸಿದ್ದರೂ, ಅದಕ್ಕೆ ಅವಲಂಭಿತರಾದ ರೈತರೇ ಚಿಂತಿಸಿದರೇ ಹೊರತು ಯಾರೂ ಮುಂದಡಿ ಇಡಲಿಲ್ಲ. ಕೆಲವರು ಸಿಎಂಗೆ ಮನವಿ ಅರ್ಪಿಸಿ ಕೈತೊಳೆದುಕೊಂಡರು.
ತಾಲೂಕು ಅಧ್ಯಕ್ಷರಾದ ಮಾದೇವ್ ಮಡಿವಾಳ ಸದಸ್ಯರು ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಎಂಎಂಪಿ ಸದಾ ಜನರ ಸೇವೆ ಬಳಗ ಪದಾಧಿಕಾರಿಗಳು ಸದಸ್ಯರು ಈ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಮಾಧ್ಯಮದ ಮುಖಾಂತರ ಎಚ್ಚರಿಸಿದ್ದಾರೆ.
Discussion about this post