ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ರಾಸಾಯನಿಕ ವಿಪತ್ತು ನಿರ್ವಹಣೆ ಅಂಗವಾಗಿ ಜಿಲ್ಲೆಯಲ್ಲಿರುವ ಅತಿ ಅಪಾಯಕಾರಿ ಕಾಖಾನೆಗಳಲ್ಲಿ ಸಂಭವಿಸಬಹುದಾದ ದುರಂತಗಳನ್ನು ತಡೆಗಟ್ಟಲು ಹಾಗೂ ಅಪಾಯಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸಂಡೂರು ತಾಲೂಕಿನ ತೋರಣಗಲ್ಲಿನ ಜೆಎಸ್‍ಡಬ್ಲೂ ಸ್ಟೀಲ್ ಲಿಮಿಟೆಡ್ ಕಾರ್ಖಾನೆಯಲ್ಲಿ ಕೋರೆಕ್ಸ್ (ಇಂಗಾಲದ ಮೋನಾಕ್ಸೈಡ್) ಸೋರಿಕೆಯ ಅಣುಕು ಪ್ರದರ್ಶನವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.
ಬಳ್ಳಾರಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ,ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಹಾಗೂ ಮೆ.ಜೆಎಸ್‍ಡಬ್ಲೂ ಸ್ಟೀಲ್ ಲಿಮಿಟೆಡ್ ಕಾರ್ಖಾನೆಯ ಸಹಯೋಗದೊಂದಿಗೆ ಈ ಅಣುಕು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜೆಎಸ್‍ಡಬ್ಲೂ ಸ್ಟೀಲ್ ಲಿಮಿಟೆಡ್ ಈ ಕಾರ್ಖಾನೆಯ ಕೋರೆಕ್ಸ್ ಅನಿಲ ಸೋರಿಕೆಯಾಗಿರುವಂತೆ ಸಂದರ್ಭವನ್ನು ಪರಿಗಣಿಸಿ ಸದರಿ ಅನಿಲ ಸೋರಿಕೆಯಿಂದ ತೊಂದರೆಗೀಡಾದ ಸುಮಾರು 22 ಕಾರ್ಮಿಕರನ್ನು ರಾಜ್ಯ ಅಗ್ನಿಶಾಮಕ ದಳದ ಸಹಯೋಗದೊಂದಿಗೆ ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಗತ್ಯವಿದ್ದಂತಹ ಕಾರ್ಮಿಕರನ್ನು ತೋರಣಗಲ್ಲಿನ ಸಂಜೀವಿನಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಯಿತು.
Also read: ಸ್ಟೀಲ್ ಬ್ರೀಡ್ಜ್ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಬಿ.ಶ್ರೀರಾಮುಲು ಅವರಿಂದ ಭೂಮಿಪೂಜೆ
ಮುಂದುವರೆದಂತೆ ಕಾರ್ಖಾನೆಯ ಕೋರೆಕ್ಸ್ ಘಟಕದ ಸುತ್ತ ಸೋರಿಕೆಯಾದಂತಹ ಅನಿಲವನ್ನು ನೀರು ಸಿಂಪಡಿಸುವ ಮೂಲಕ ಚದುರಿಸಿ, ಅನಿಲ ಸೋರಿಕೆ ನಿಯಂತ್ರಣಕ್ಕೆ ಬೇಕಾದ ಅಗತ್ಯ ಪ್ರೋಸೆಸ್ ಕಂಟ್ರೋಲ್ ಕ್ರಮವನ್ನು ತೆಗೆದುಕೊಂಡ ನಂತರ ಆಲ್-ಕ್ಲಿಯರ್ ಸೈರನ್ ನೀಡುವ ಮುಖಾಂತರ ವಿಪತ್ತು ನಿರ್ವಹಣಾ ಕ್ರಮವನ್ನು ಬಳ್ಳಾರಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೇತೃತ್ವದಲ್ಲಿ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮೆ.ಬಿಟಿಪಿಎಸ್ (ಕೆಪಿಸಿಎಲ್), ಮೆ.ಜೆಎಸ್‍ಡಬ್ಲೂ ಎನರ್ಜಿ ಲಿಮಿಟೆಡ್, ಮೆ.ಜೆಎಸ್‍ಡಬ್ಲೂ ಸಿಮೆಂಟ್ ಲಿಮಿಟೆಡ್, ಮೆ.ಎಪ್ಸಿಲಾನ್ ಕಾರ್ಬನ್ ಪ್ರೈ ಲಿ., ಮೆ.ಎಸಿಸಿ ಲಿಮಿಟೆಡ್, ಮೆ.ಜೆಎಸ್‍ಡಬ್ಲೂ ಪ್ರಾಜೆಕ್ಟ್ಸ್ ಲಿಮಿಟೆಡ್, ಕಾರ್ಖಾನೆಯ ಆಡಳಿತವರ್ಗದವರು, ಅವರ ಉಪಕರಣಗಳು ಹಾಗೂ ಮಾನವ ಸಂಪನ್ಮೂಲವನ್ನು ವಿಪತ್ತು ನಿರ್ವಹಣಾ ಕಾರ್ಯಕ್ಕೆ ನಿಯೋಜಿಸಿ ಸದರಿ ಅಣಕು ಪ್ರದರ್ಶನವನ್ನು ಯಶಸ್ವಿಗೊಳಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post