ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಪ್ರಧಾನ ಅಂಚೆ ಕಛೇರಿ ಮನೋರಂಜನಾ ಕೂಟ ವತಿಯಿಂದ ಆಯೋಜಿಸಲಾಗಿದ್ದ 4ನೇ ಪೋಸ್ಟಲ್ ಕ್ರಿಕೆಟ್ ಲೀಗ್ 2021 ಪಂದ್ಯಾವಳಿಯಲ್ಲಿ ಭದ್ರಾವತಿಯ ಬ್ಲಾಸ್ಟರ್‍ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು.

ಬೆಳಿಗ್ಗೆ 7:30ರಿಂದ ಸಂಜೆ 6 ಗಂಟೆವರೆಗೂ ನಡೆದ ಪಂದ್ಯಾವಳಿಯಲ್ಲಿ ಭದ್ರಾವತಿ ಬುಲ್ಸ್, ಯೂನಿಟೆಡ್ ಕ್ರಿಕೆಟರ್‍ಸ್ ಗೋಪಾಲ, ಚನ್ನಗಿರಿ ರೆಬೆಲ್ಸ್, ಕೊಡಚಾದ್ರಿ ಬ್ರದರ್‍ಸ್, ಡಪ್ ಕಬ್ಸ್ ಹೊನ್ನಾಳಿ, ವಿನೋಬನಗರ್, ಮಾಸ್ಟರ್ ಬ್ಲಾಸ್ಟರ್ ಕ್ರಿಕೆಟರ್‍ಸ್, ಶಿಕಾರಿಪೂರ್ ಶೂಟರ್‍ಸ್, ಇಲೆವೆನ್ ಮೇಲ್ಸ್ ಕ್ರಿಕೆಟರ್‍ಸ್, ಭದ್ರಾವತಿ ಬ್ಲಾಸ್ಟರ್‍ಸ್, ಸಾಗರ್ ಸೀ ಬರ್ಡ್ಸ್, ಸಾಗರ್ ಸ್ಟ್ರಿಕರ್‍ಸ್, ಆರ್ ಭಟ್ ಟೀಮ್, ಲೋಸರ್ ಮತ್ತು ಸ್ಟಾರ್ ಇಲೆವೆನ್ ತೀರ್ಥಹಳ್ಳಿ ಸೇರಿದಂತೆ ಒಟ್ಟು 15 ತಂಡಗಳು ಪಾಲ್ಗೊಂಡಿದ್ದವು. ಒಟ್ಟು 21 ಪಂದ್ಯಗಳು ಜರುಗಿದವು. 4 ಜನ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post