ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಿಐಎಸ್ ಎಲ್ ಕಾರ್ಮಿಕನೋರ್ವ ತನ್ನ ತಂಗಿ ಮದುವೆಯ ಶುಭಕಾರ್ಯದ ಸಮಯದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೋಮಾರನಹಳ್ಳಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ತಂಗಿಯ ಮದುವೆ ನಿಶ್ಚಿತಾರ್ಥ ಹಮ್ಮಿಕೊಳ್ಳಲಾಗಿದ್ದು, ಕಲ್ಯಾಣ ಮಂಟಪದ ಹಿಂಬದಿಯಲ್ಲಿರುವ ಮರವೊಂದಕ್ಕೆ ಕಾರ್ಮಿಕ ಚೇತನ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Also read: ಚಂದ್ರಗುತ್ತಿ: ಭಾರತ ಹುಣ್ಣಿಮೆಯ ಪ್ರಯುಕ್ತ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ
ವಿಐಎಸ್ ಎಲ್ ಕಾರ್ಖಾನೆಯಲ್ಲಿ ಎಸ್ ಎಂಎಸ್(ಸ್ಟೀಲ್ ಮೆಲ್ಟಿಂಗ್ ಶಾಪ್) ನಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಕುಮಾರ್ (32) ಹೆಚ್ ಟಿ ಎಸ್ (ಹೀಟ್ ಟ್ರೀಟ್ ಮೆಂಟ್ ಶಾಪ್) ನಲ್ಲಿ ಕೆಲಸ ಮಾಡುತ್ತಿದ್ದರು. ಸಾವಿನ ಸುತ್ತ ಹಲವು ವದಂತಿಗಳು ಕೇಳಿ ಬರುತ್ತಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















