ಭದ್ರಾವತಿ: ಭಾರಿ ಮಳೆಯಿಂದಾಗಿ ನೆರೆಹಾವಳಿಗೆ ತುತ್ತಾದ ಸಂತ್ರಸ್ತರಿಗೆ ತಾಲೂಕಿನ ಕಾರೇಹಳ್ಳಿ ಗ್ರಾಮದ ವಿವಿಧ ಸ್ತ್ರೀಶಕ್ತಿ ಸಂಘಗಳು ಸುಮಾರು 40 ಸಾವಿರ ಮೌಲ್ಯದ ಬಟ್ಟೆ ಚಾಪೆ ಸೇರಿದಂತೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ತಾಲೂಕು ಆಡಳಿತಕ್ಕೆ ನೀಡುವ ಮೂಲಕ ಸಂತ್ರಸ್ತರಿಗೆ ನೆರವಿಗೆ ಮುಂದಾಗಿದ್ದಾರೆ.
ಗ್ರಾಮದ ಶಾರದ ಸ್ರೀ ಶಕ್ತಿ ಸಂಘ, ಅಂಬಿಕಾ, ವಿನಾಯಕ ಮುಂತಾದ ಮಹಿಳಾ ಸಂಘಗಳ ಸದಸ್ಯರು ನಿತ್ಯ ಬಳಕೆಯ ಟೂತ್‍ಪೇಸ್ಟ್, ಬ್ರೆಶ್, ಸೋಪು, ರಗ್ಗು, ಬೆಡ್‍ಶೀಟ್‍ಗಳು, ಸೀರೆ, ಪಂಚೆ ಸೇರಿದಂತೆ ಸುಮಾರು ಬಗೆಯ ವಸ್ತುಗಳನ್ನು ಸಂತ್ರಸ್ತರಿಗೆ ನೀಡಿ ನೆರವಾಗಿದ್ದಾರೆ.
ನೆರವು ಸ್ವೀಕರಿಸಿದ ತಹಶೀಲ್ದಾರ್ ಸೋಮಶೇಖರ್ ಗ್ರಾಮಸ್ಥರ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಸಂಘಟನೆಗಳ ಪ್ರಮುಖರಾದ ಕಮಲಾಕ್ಷಿ, ಸೌಭಾಗ್ಯ, ಸಾವಿತ್ರಮ್ಮ, ದಿವ್ಯ, ಮಂಜಮ್ಮ, ಲಲಿತಮ್ಮ, ಸ್ವಾಮಿಕಣ್ಣ, ಅರುಣಾ ಸೇರಿದಂತೆ ಗ್ರಾಮದ ಹಲವರು ಉಪಸ್ಥಿತರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post