ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶಿವಮೊಗ್ಗ ಜಿಲ್ಲಾ ಪೊಲೀಸ್, ಆರ್’ಎಎಫ್ ಹಾಗೂ ಭದ್ರಾವತಿಯ ಪ್ರತಿಷ್ಠಿತ ರಕ್ತನಿಧಿ ಕೇಂದ್ರವಾದ ಜೀವ ಸಂಜೀವಿನ ರಕ್ತ ಕೇಂದ್ರದ ಸಹಯೋಗದಲ್ಲಿ ಆಗಸ್ಟ್ 22ರಂದು ಬೃಹತ್ ರಕ್ತದಾನ ಶಿಬಿರವನ್ನು #Blood Donation Camp ಆಯೋಜಿಸಲಾಗಿದೆ.
ಆಗಸ್ಟ್ 22ರ ನಾಳೆ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಎಂಪಿಎಂ ಕಾರ್ಖಾನೆ ಆವರಣದ 97 ಬಿಎನ್ ಆರ್’ಎಎಫ್’ನಲ್ಲಿ ಶಿಬಿರ ನಡೆಯಲಿದೆ.
ಶಿಬಿರವನ್ನು ಆಯೋಜನೆ ಮಾಡಿರುವ ಭದ್ರಾವತಿಯ ಜೀವ ಸಂಜೀವಿನಿ ರಕ್ತ ಕೇಂದ್ರದ ಸಂಸ್ಥಾಪಕರಾದ ಹರೀಶ್ ಮಾತನಾಡಿ, ತುರ್ತು ಅವಶ್ಯತೆಯಾಗಿರುವ ರಕ್ತ ಸಂಗ್ರಹಕ್ಕಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಭದ್ರಾವತಿಯ ನಾಗರಿಕರು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕು ಎಂದು ವಿನಂತಿಸಿದ್ದಾರೆ.
ರಕ್ತದಾನ ಕುರಿತು ಮಾಹಿತಿ ನೀಡಿದ ಅವರು, ರಸ್ತೆ ಅಪಘಾತ, ಸುಟ್ಟಗಾಯಗಳು ಅಥವಾ ನೈಸರ್ಗಿಕ ವಿಕೋಪ ಗಳಂತಹ ಆಘಾತಕಾರಿ ಸಂದರ್ಭ ಗಳಲ್ಲಿ ರಕ್ತದ ಅಗತ್ಯವಿರುತ್ತದೆ. ತಕ್ಷಣದ ಲಭ್ಯತೆಯು ಕೆಲವೇ ನಿಮಿಷಗಳಲ್ಲಿ ಜೀವಗಳನ್ನು ಉಳಿಸಬಹುದು. ಅನೇಕ ಪ್ರಮುಖ ಶಸ್ತçಚಿಕಿತ್ಸೆಗಳಿಗೆ ಶಸ್ತçಚಿಕಿತ್ಸೆಯ ಮೊದಲು, ಸಮಯದಲ್ಲಿ ಅಥವಾ ನಂತರ ರಕ್ತ ವರ್ಗಾವಣೆಯ ಅಗತ್ಯವಿರುತ್ತದೆ. ಹೆರಿಗೆಯ ಸಮಯದಲ್ಲಿ ಉಂಟಾಗುವ ತೊಂದರೆಗಳು ಭಾರೀ ರಕ್ತಸ್ರಾವಕ್ಕೆ ಕಾರಣವಾಗಬಹುದು, ಆದ್ದರಿಂದ ತಾಯಂದಿರನ್ನು ಉಳಿಸಲು ರಕ್ತದಾನ ಮಾಡುವುದು ಅತ್ಯಗತ್ಯ. ಇಂತಹ ಮಹಾನ್ ಕಾರ್ಯಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮಾಹಿತಿಗಾಗಿ ಹರೀಶ್ (9945484874) ಅವರನ್ನು ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post