ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ಭದ್ರಾವತಿಯ ನ್ಯೂಟೌನ್ ನ ಸರ್ಕಾರಿ ಬಾಲಿಕಾ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದ್ದ ಏಕತಾ ಓಟ ಮತ್ತು ಜಾಥಾ ಕಾರ್ಯಕ್ರಮವನ್ನು ಬಿಇಒ ನಾಗೇಂದ್ರಪ್ಪ ಉದ್ಘಾಟಿಸಿದರು.
ಪ್ರಸಕ್ತ ಸ್ಥಿತಿಯಲ್ಲಿ ರಾಷ್ಟೀಯ ಏಕತೆ ಯ ಮಹತ್ವ, ಇದರಲ್ಲಿ ವಿದ್ಯಾರ್ಥಿಗಳ ಪಾತ್ರ ಮತ್ತು ಸರ್ದಾರ್ ವಲ್ಲಭ ಭಾಯ್ ಪಟೇಲ್ ಇವರ ಕೊಡುಗೆ ಎಲ್ಲದರ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ಉಪಪ್ರಾಚಾರ್ಯರಾದ ಟಿ. ಎಸ್. ಸುಮನಾ, ಸಂಪನ್ಮೂಲ ವ್ಯಕ್ತಿ ನವೀದ್, ದೈಶಿ ನೂರ್ ಫಾತಿಮಾ, ಹಿರಿಯ ಶಿಕ್ಷಕರಾದ ಸತ್ಯನಾರಾಯಣ ಭಟ್ ಇವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
Also read: ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿ
ಉಪಪ್ರಾಚಾರ್ಯ ಟಿ. ಎಸ್. ಸುಮನಾ , ಎಲ್ಲಾ ಶಿಕ್ಷಕರು, ಎಸ್‌ಡಿಎಮ್‌ಸಿ ಸಮಿತಿ ಸದಸ್ಯರು ಮತ್ತು ಎಲ್ಲಾ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು .
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post