ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಅರಬಿಳಚಿ ಕ್ಯಾಂಪ್ ಬಳಿಯ ಭದ್ರಾ ನಾಲೆಯಲ್ಲಿ ನಾಲ್ವರು ಮುಳುಗಿ ಸಾವನ್ನಪ್ಪಿರುವ ಪ್ರಕರಣದಲ್ಲಿ #Bhadra canal tragedy ಮೂರು ದಿನಗಳ ನಂತರ 2ನೇ ಶವ ಪತ್ತೆಯಾಗಿದೆ.
ಇಂದು ಮುಂಜಾನೆ ಎರಡನೇ ಮೃತದೇಹ ಪತ್ತೆಯಾಗಿದ್ದು, ಮೃತರನ್ನು ನೀಲಾಬಾಯಿ(55) ಎಂದು ಗುರುತಿಸಲಾಗಿದೆ.
ಬಟ್ಟೆ ಸ್ವಚ್ಚಗೊಳಿಸಲು ನಾಲೆಗೆ ಇಳಿದಿದ್ದ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ನಾಪತ್ತೆಯಾಗಿದ್ದರು. ಆನಂತರ ನಡೆಸಿದ ಕಾರ್ಯಾಚರಣೆಯಲ್ಲಿ ಎರಡನೇ ದಿನ ರವಿಕುಮಾರ್ ಎನ್ನುವವರ ಶವ ಪತ್ತೆಯಾಗಿತ್ತು. ಅಂದು ಮುಳುಗು ತಜ್ಞ ಈಶ್ವರ್ ಮಲ್ಪೆ #Eshwar Malpe ಅವರ ತಂಡವು ಕಾರ್ಯಾಚರಣೆ ನಡೆಸಿತ್ತು.
ನಾಲೆಯಲ್ಲಿ ನಾಪತ್ತೆಯಾಗಿರುವ ಶ್ವೇತಾ ಮತ್ತು ಪರಶುರಾಮ್ ಎಂಬ ದಂಪತಿಗಳ ಶೋಧ ಕಾರ್ಯ ಮುಂದುವರೆದಿದೆ.
ಪೊಲೀಸರು, ಅಗ್ನಿಶಾಮಕ ದಳ ಮತ್ತು ಎಸ್’ಡಿಆರ್’ಎಫ್ #NDRF ತಂಡಗಳು ನಾಲ್ಕನೇ ದಿನವೂ ಶೋಧ ಕಾರ್ಯವನ್ನು ತೀವ್ರಗೊಳಿಸಿವೆ. ಒಟ್ಟು ಇನ್ನೂ ಎರಡು ಶವ ದೊರೆಯಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















