ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕುತ್ತಿಗೆಗೆ ಹಗ್ಗ ಬಿಗಿದು ವ್ಯಕ್ತಿಯೊಬ್ಬನನ್ನು ಕೊಲೆ #Murder ಮಾಡಿ ತಾಲೂಕಿನ ಕಾರೇಹಳ್ಳಿ ಗ್ರಾಮದ ತಾಳೆ ಎಣ್ಣೆ ಫ್ಯಾಕ್ಟರಿ ಬಳಿ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ತಾಲೂಕಿನ ಮೈದೊಳಲು ಮಲ್ಲಾಪುರ ನಿವಾಸಿ ಪರಶುರಾಮ್(೩೬) ಮೃತ. ಕೊಲೆ ಆರೋಪದ ಮೇಲೆ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯ ಸುದೀಪ, ಭದ್ರಾವತಿ ತಾಲೂಕಿನ ಗೊಂದಿ ಗ್ರಾಮದ ಮಹಂತೇಶ ಹಾಗೂ ಬೊಮ್ಮೇನಹಳ್ಳಿ ಅರುಣ್ ಎಂಬುವರನ್ನು ಬಂದಿಸಲಾಗಿದೆ. ಸೋಮವಾರ ಸಂಜೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Also read: ಹೊಸನಗರ: ಎಬಗೋಡು ಬಳಿ ನಿಧಿಗಾಗಿ ಹುಡುಕಾಟ!
ಶವ ಕೊಳೆತು ವಾಸನೆಯಿಂದ ರೈತರ ಗಮನಕ್ಕೆ ಬಂದಿದ್ದು, ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಮಹಂತೇಶ, ಮೃತ ಪರಶುರಾಮನ ತಂಗಿಯ ಗಂಡನಾಗಿದ್ದು, ಸುಫಾರಿ ಕೊಟ್ಟಿದ್ದ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post