ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಸಂತೆ ಮೈದಾನ ಬಳಿಯ ಎನ್’ಎಂಸಿ ಬೋವಿ ಕಾಲೋನಿ ಎಡಭಾಗದ ಮನೆಯೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಸ್ಥಳೀಯರ ಸಮಯಪ್ರಜ್ಞೆ ಹಾಗೂ ತುರ್ತು ಸಹಕಾರದಿಂದಾಗಿ ಅನಾಹುತವೊಂದು ತಪ್ಪಿದೆ.
ಬೋವಿ ಕಾಲೋನಿ ಬಲಭಾಗದ ಮೂರನೇ ಅಡ್ಡರಸ್ತೆ(ಉಡುಗಲಮ್ಮ ದೇವಾಲಯದ ಬಳಿ) ಮನೆಯೊಂದರ ಅಡುಗೆ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಹಂಚಿನ ಮನೆಯಾದ್ದರಿಂದ ಬೆಂಕಿ ವೇಗವಾಗಿ ಹಂಚಿನ ತೀರುಗಳಿಗೆ ವ್ಯಾಪಿಸಿದೆ. ಪರಿಣಾಮವಾಗಿ ಮನೆಯ ಹಂಚು ಭಾಗ ಬಹಳಷ್ಟು ಸುಟ್ಟು ಕರಕಲಾಗಿದ್ದು, ಅಡುಗೆ ಮನೆಯಲ್ಲಿನ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಸುಮಾರು ಹತ್ತಾರು ಅಡಿಗೂ ಅಧಿಕ ಎತ್ತರ ಸುಮಾರು ಮುಕ್ಕಾಲು ಗಂಟೆಗೂ ಅಧಿಕ ಕಾಲ ಹೆಂಚಿನ ತೀರುಗಳು ಉರಿಯುವ ಹೊಗೆಯಾಡುತ್ತಿತ್ತು.
Also read: ಎಚ್‌ಎಂಪಿವಿ ಹೊಸ ವೈರಸ್ | ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ಏನು?
ಸ್ಥಳೀಯರ ಸಹಾಯದಿಂದ ತಪ್ಪಿದ ಅನಾಹುತ
ಬೆಂಕಿ ಹೊತ್ತಿಕೊಂಡ ವಿಚಾರ ತಿಳಿಯುತ್ತಿದ್ದಂತೆಯೇ ಅದೇ ಬೀದಿಯ ಯುವಕರು ಹಾಗೂ ಮಹಿಳೆಯರು ನೆರವಿಗೆ ಧಾವಿಸಿದರು.
ತತಕ್ಷಣವೇ ಗ್ಯಾಸ್ ಸಿಲಿಂಡರ್ ಹೊರಗಿಟ್ಟು, ಯಾರಿಗೂ ಯಾವುದೇ ರೀತಿಯಲ್ಲೂ ತೊಂದರೆಯಾಗದAತೆ ಹೊರಕ್ಕೆ ಕರೆತಂದರು.
ಏಣಿ ಹಾಕಿಕೊಂಡು ಉರಿಯುತ್ತಿದ್ದ ಮನೆಯ ಮೇಲ್ಬಾಗದಲ್ಲಿ ನಿಂತು ನಿರಂತರವಾಗಿ ನೀರು ಸುರಿದರು. ಯುವಕರು ಹಾಗೂ ಮಹಿಳೆಯರು ತರಬೇತಿ ಇದ್ದವರಂತೆ ಒಬ್ಬರ ಪಕ್ಕ ಒಬ್ಬರು ನಿಂತು ನೂರಾರು ಬಟೇಕ್ ನೀರು ಹಾಕುವ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಬೆಂಕಿ ನಂದಿಸುವುದು ಕೊಂಚ ತಡವಾದರೂ ಅಕ್ಕ ಪಕ್ಕದ ಮನೆಗಳಿಗೆ ವ್ಯಾಪಿಸುವ ಆತಂಕವಿತ್ತು. ಅಗ್ನಿ ಶಾಮದ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















